ಉ.ಕ ಸುದ್ದಿಜಾಲ ಅಥಣಿ :

ಎರಡು ಬೈಕ್ ಗಳ ಮಧ್ಯ ಮುಖಾ-ಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನನ್ನಪ್ಪಿದ್ದಾನೆ ಮತ್ತೊರ್ವನ ಸ್ಥಿತಿ ಚಿಂತಾಜನಕವಾಗಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗುಂಡೇವಾಡಿ – ಪಾರ್ಥನಹಳ್ಳಿ ಮದ್ಯದ ಜತ್ತ – ಜಾಂಬೋಟಿ ಮುಖ್ಯ ಹೆದ್ದಾರಿಯ ಎಚ್ ಪಿ ಪೆಟ್ರೋಲ್ ಬಂಕ್ ಹತ್ತಿರ ಅಪಘಾತ ಸಂಭವಿಸಿದೆ.

ರಸ್ತೆ ಅಪಘಾತದಲ್ಲಿ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಮಲ್ಲಯ್ಯ ಮಠಪತಿ (21) ಮೃತ ದುರ್ದೈವಿಯಾಗಿದ್ದು. ಮತ್ತೊಬ್ಬ ಬೈಕ್ ಸವಾರ ನೆರೆ ರಾಜ್ಯ ಮಹಾರಾಷ್ಟ್ರದ ವಜ್ರವಾಡ ಗ್ರಾಮದ ಯುವಕ ಎಂದು ತಿಳಿದು ಬಂದಿದೆ.

ತಲೆಗೆ ಬಲವಾದ ಎಟು ತಗುಲಿದರಿಂದ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಥಣಿ ಪೊಲೀಸ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೋಸ್ಟ್ ಠಾಣೆ ವ್ಯಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.