ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯಲ್ಲಿ ಹಾಡು ಹಗಲೇ ಸ್ಕ್ರೂಡ್ರೈವರ್ ನಿಂದ ಚುಚ್ಚಿ ಯುವಕನ ಕೊಲೆ. ಬೆಳಗಾವಿ ನಗರದ ಮಹಾಂತೇಶ ನಗರದ ಬ್ರೀಡ್ಜ್ ಬಳಿ ಘಟನೆ ನಡೆದಿದೆ.

ಬೆಳಗಾವಿ ಗಾಂಧಿ ನಗರ ನಿವಾಸಿ ಇಬ್ರಾಹಿಂ ಗೌಸ್ (22) ಮೃತ ಯುವಕ. ಇದೇ ಬಡಾವಣೆಯ ಯುವತಿ ಜೊತೆಗೆ ಇಬ್ರಾಹಿಂ ಪ್ರೀತಿ, ಪ್ರೇಮ. ಇವತ್ತು ಯುವತಿ ಜೊತೆಗೆ ಬೈಕ್ ನಲ್ಲಿ ಹೊರಟ್ಟಿದ್ದ ಇಬ್ರಾಹಿಂ. ಇದನ್ನು ನೋಡಿದ ಯುವತಿಯ ಸಹೋದರನಿಂದ ಹತ್ಯೆ.

ಮುಜಮಿಲ್ ಸತ್ತಿಗೇರಿಯಿಂದ ಸ್ಕ್ರೂಡ್ರೈವರ್ ನಿಂದ ಹತ್ಯೆ‌ ಮಾಡಿದ್ದಾನೆ. ಗಾಯಾಳು ಇಬ್ರಾಹಿಂ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು. ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆ ಇಬ್ರಾಹಿಂ ಸಾವನಪ್ಪಿದ್ದಾನೆ.

ಮಾಳ ಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಕೊಲೆಯಾದ ಯುವಕ ಇಬ್ರಾಹಿಂ ಗೌಸ್