ಉ.ಕ ಸುದ್ದಿಜಾಲ ಅಥಣಿ :
ಲಕ್ಷಣ ಸವದಿ ಸುಪುತ್ರ ಸುಮೀತ ಸವದಿ ಹುಲಿ ಉಗುರು ಧರಸಿದ್ದು ಅದು ನಿಜವಾದ ಹುಲಿ ಉಗುರು ಅಲ್ಲ ಪ್ಲಾಸ್ಟಿಕ್ ಉಗುರು ಎಂದು ಮಾಧ್ಯಮಗಳಿಗೆ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಸ್ಪಷ್ಟನೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಸ್ವಗೃಹದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾನೂನು ಎಲ್ಲರಿಗೂ ಒಂದೆ ಎಲ್ಲರೂ ತಲೆ ಬಾಗಲೆಬೇಕು. ಹುಲಿ ದೇಶದ ಸಂಪತ್ತು ಕಾಪಾಡುವುದು ಎಲ್ಲರ ಕರ್ತವ್ಯ. ನಮ್ಮ ತಮ್ಮನ ಕೊರಳಲ್ಲಿ ಇರೋದು ಹುಲಿ ಉಗುರು ಮಾದರಿಯ ಪ್ಲಾಸ್ಟಿಕ್ ಪೆಂಡೆಂಟ್..
ಅರಣ್ಯಾಧಿಕಾರಿಗಳ ತನಿಖೆಗೆ ನಾವು ಸಹಕರಿಸುತ್ತೇವೆ. ಸಹೋದರ ಸುಮೀತ ರಾಜಸ್ಥಾನದ ಪ್ರವಾಸದಲ್ಲಿ ಇದ್ದಾನೆ ಅರಣ್ಯಾಧಿಕಾರಿಗಳಿಗೆ ಪೆಂಡೆಂಟ್ ಹಸ್ತಾಂತರ ಮಾಡಿದ್ದೆವೆ ಎಸ್.ಎಫ್.ಎಲ್ ವರದಿ ಬಂದ ನಂತರ ಸತ್ಯಾಸತ್ಯತೆ ಗೊತ್ತಾಗುತ್ತದೆ.