ಉ.ಕ ಸುದ್ದಿಜಾಲ‌ ನಿಪ್ಪಾಣಿ :

ಶಾಲಾ ಬಾಲಕನೊಬ್ಬನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಬಾಳುಮಾಮಾ ನಗರದಲ್ಲಿರುವ ಖಾಲಿ ಮನೆಯೊಂದರಲ್ಲಿ ಬಾಲಕನ ಶವ ಪತ್ತೆಯಾಗಿದೆ.

ನಿಪ್ಪಾಣಿ ಹಳೆಯ ಸಂಭಾಜಿನಗರದ ನಿವಾಸಿ, 8ನೇ ತರಗತಿಯ ವಿದ್ಯಾರ್ಥಿ ಸಾಕಿಬ್ ಸಮೀರ್ ಪಠಾಣ (14) ಕೊಲೆಯಾದ ಬಾಲಕ. ಕೊಲೆಗೆ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಮುರ್ಗುಡ್ ರಸ್ತೆಯಲ್ಲಿರುವ ದೇವಚಂದ್ ಮಹಾವಿದ್ಯಾಲಯದ ಎದುರಿನ ಬಾಳುಮಾಮಾ ನಗರದಲ್ಲಿರುವ ಖಾಲಿ ಮನೆಯೊಂದರಲ್ಲಿ ಬಾಲಕನ ಶವ ಪತ್ತೆಯಾಗಿದೆ. ಗುರುವಾರ ರಾತ್ರಿ ಕೊಲೆಯಾಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಚಿಕ್ಕೋಡಿ ಡಿವೈಎಸ್‌ಪಿ ಗೋಪಾಳಕೃಷ್ಣ ಗೌಡರ, ಸಿಪಿಐ ಬಿ.ಎಸ್. ತಳವಾರ, ಪಿಎಸ್‍ಐ ಉಮಾದೇವಿ ಜಿ. ಘಟನಾಸ್ಥಳ ಪರಿಶೀಲಿಸಿದರು. ನಿಪ್ಪಾಣಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.