ಅಥಣಿ :
ಟ್ರ್ಯಾಕ್ಟರ್ ಟ್ರೈಲರ್ ಪಲ್ಟಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು ಸಂಭವಿಸಿದೆ. ಇನೊರ್ವ ಸ್ಥಿತಿ ಗಂಭೀರವಾಗಿದ್ದು ಅಥಣಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತಾಂವಶಿ ಗ್ರಾಮದ ಸಮೀಪದಲ್ಲಿ ಈ ಘಟನೆ ಸಂಭವಿಸಿದೆ. ಮದಭಾವಿ ಗ್ರಾಮದ ಯುವಕ ಸಚಿನ ರಾಯಪ್ಪ ನಿವಲಗಿ (25) ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಬೈಕ್ ಸವಾರರು ಸಂಚಾರ ಮಾಡುವ ಸಂದರ್ಭದಲ್ಲಿ ಕಾರ್ಖಾನೆಗೆ ಕಬ್ಬು ರವಾನೆ ಮಾಡುವ ಟ್ರ್ಯಾಕ್ಟರ್ ಟ್ರೈಲರ್ ಪಿನ್ ಕಟ್ಟಾಗಿ ಈ ಅವಘಡ ಸಂಭವಿಸಿದೆ. ಅಥಣಿ ತಾಲೂಕಿನ ಅನಂತಪುರ – ತಾಂವಶಿ ರಸ್ತೆ ಮೇಲೆ ಅಪಘಾತ ಸಂಭವಿಸಿದ್ದು. ಅಥಣಿ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.