ಮಂಗಳೂರು :
ಪವರ್ ಸ್ಟಾರ್ ಪುನಿತ್ ರಾಜಕುಮಾರ ಅಪಾರ ಅಭಿಮಾನಿಗಳ
ಬಿಟ್ಟು ಅಗಲಿದ್ದು ಹಲವಾರು ಅಭಿಮಾನಿಗಳು ಅವರ ನೆನಪಿನಲ್ಲಿಯೆ ಇದ್ದಾರೆ. ಪುನೀತ ಅವರ ನಗು ಇನ್ನೂ ಕೋಟ್ಯಾಂತರ ಜನರನ್ನು ಕಾಡುತ್ತಿದೆ. ಅಪ್ಪು ಅಗಲಿ ವಾರವಾದರೂ ಅಭಿಮಾನಿಗಳಿಗೆ ಅಪ್ಪು ಇನ್ನಿಲ್ಲ ಎಂಬ ಕಹಿ ಸತ್ಯ ಅರಗಿಸಿಕೊಳ್ಳಲು ಆಗುತ್ತಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆಯ ಅಪ್ಪು ಅಭಿಮಾನಿ, ಕಲಾವಿದ ಗಣೇಶ್ ಆಚಾರ್ಯ ಗುಂಪಲಾಜೆ ವಿಶೇಷವಾಗಿ ಅಪ್ಪುವಿಗೆ ನಮನ ಸಲ್ಲಿಸಿದ್ದಾರೆ. ಸುಮಾರು ಏಳು ಗಂಟೆಗಳ ಕಾಲ ಶ್ರಮ ವಹಿಸಿ ರಂಗೋಲಿಯಲ್ಲಿ ಅಪ್ಪುವಿನ ನಗು ಮೊಗದ ಚಿತ್ರ ರಚಿಸುವುದರ ಮೂಲಕ ಅಪ್ಪುವಿಗೆ ಭಾವಪೂರ್ಣ ನಮನ ಸಲ್ಲಿಸಿದ್ದಾರೆ. ಈ ಅಪ್ಪುವಿನ ಚಿತ್ರ ನೋಡಲು ಅಭಿಮಾನಿಗಳು ಬರುತ್ತಿದ್ದು ಅಪ್ಪುವಿನ ನಗುವಿನ ಚಿತ್ರ ರಂಗೋಲಿ ಮೂಲಕ ಬಿಡಿಸುವುದರ ಮೂಲಕ ಕಲಾವಿದ ಗಣೇಶ ಅವರು ವಿಶೇಷ ರೀತಿ ಅಭಿಮಾನ ಮೆರದಿದ್ದಾರೆ.