ಯಾದಗಿರಿ :
ಮನೆಯೊಳಗೆ ನುಗ್ಗುತ್ತಿದ್ದ ಹಾವನ್ನು ಹಿಡಿದ ವೃದ್ದ ಅದನ್ನ ಬೇರೆ ಕಡೆ ಚೀಲದಲ್ಲಿ ಹಾಕಿಕೊಂಡು ಹೋಗುವ ಬದಲ್ಲಿ ಕೈಯಲ್ಲಿ ಹಾವನ್ನು ಹಿಡಿಸು ಅದರ ಜೊತೆ ಆಟವಾಡುತ್ತಿರುವಾಗ ಸುಮಾರು ಐದು ಬಾರಿ ಹಾವಿನಿಂದ ಕಚ್ಚಿಸಿಕೊಂಡು ಸಾವನಪ್ಪಿರುವ ಘಟನೆಯೊಂದು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋಡಿಹಾಳ ಗ್ರಾಮದಲ್ಲಿನಡೆದಿದೆ.
ಗೋಡಿಹಾಳ ಗ್ರಾಮದ ಬಸವರಾಜ ಪೂಜಾರಿ ಸಾವನ್ನಪ್ಪಿದ ವ್ಯಕ್ತಿ. ಈ ಹಿಂದೆ ಕೂಡಾ ಹಾವು ಹಿಡಿದು ದೂರ ಬಿಟ್ಟು ಬರುತ್ತಿದ್ದ ವೃದ್ದ. ಇಂದು ಕೂಡಾ ಮನೆಯಲ್ಲಿ ಹಾವು ಬರುತ್ತಿದ್ದ ವೇಳೆ ಹಿಡಿದಿದ್ದ. ಹಿಡಿದಿರೊ ಹಾವು 5 ಕ್ಕೂ ಹೆಚ್ಚು ಬಾರಿ ಕಚ್ಚಿ ವ್ಯಕ್ತಿ ಸಾವನಪ್ಪಿರುವ ವೃದ್ದ. ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.