ಮಂಡ್ಯ :
ಪವರ್ ಸ್ಟಾರ್ ಪುನೀತ್ ಸಾವಿಗೆ ನಟ ಪ್ರೇಮ್ ಸಂತಾಪ ಸೂಚಿಸಿದ್ದು, ಅಪ್ಪು ಸಾವಿಗೆ ಜಿಮ್‌ನ ವರ್ಕ್ ಔಟ್ ಕಾರಣ ಅಲ್ಲ ಮಂಡ್ಯದಲ್ಲಿ ಪ್ರೇಮಂ ಪೂಜ್ಯಂ ಚಿತ್ರ ಪ್ರೊಮೋಷನ್‌ಗೆ ಬಂದಿದ್ದ ವೇಳೆ ಹೇಳಿದರು.
ಸೋಷಿಯಲ್ ಮೀಡಿಯಾದಲ್ಲಿ ಅಪ್ಪು ಸಾವಿಗೆ ಜಿಮ್‌ಗೆ ಕಾರಣ ಎಂದು ಹಬ್ಬಿಸಿದ್ದಾರೆ. ಇದ್ರಿಂದ ಜಿಮ್ ನಲ್ಲಿ ವರ್ಕೌಟ್ ಮಾಡುವವರಿಗೆ ಆತಂಕ ಶುರುವಾಗಿದೆ. ಅಲ್ದೆ ಬಹುತೇಕ ನಗರಗಳಲ್ಲಿ ಜಿಮ್ 90% ಅಡ್ಮಿಷನ್ ಕಡಿಮೆಯಾಗಿದೆ. ಈ ರೀತಿಯಾಗಿ ಜಿಮ್ ಬಗ್ಗೆ ತಪ್ಪು ಕಲ್ಪನೆ ಸರಿಯಲ್ಲ.
ಅಪ್ಪುಸರ್ ತೀರಿಕೊಂಡ ಮೇಲೆ ಹಲವು ಕಾಲ್ ಬಂದ್ವು, ಜಿಮ್ ಮಾಡೊದನ್ನ ಬಿಟ್ಟು ಬಿಡಿ ಅಂತ. ಜಿಮ್ ಹಿಂದಾನೇ ಅಪ್ಪು ಸಾವಿಗೆ ಅನ್ನುವುದು ತಪ್ಪು ಭಾವನೆ. ನನಗೆ ಹಾಗೂ ನನ್ನ ಫ್ಯಾಮಿಲಿಗೆ ಆತ್ಮೀಯವಾದ ಗೆಳೆಯ ಅಪ್ಪು. ಕನ್ನಡ ಇಂಡಸ್ಟ್ರಿಯ ದೊಡ್ಡ ಆಸ್ತಿಯನ್ನ ಕಳೆದಕೊಂಡಿದ್ದೇವೆ. ಅಪ್ಪು ನೆನೆದು ಭಾವುಕರಾದ ನಟ ಪ್ರೇಮ್.