ಯಾದಗಿರಿ :

ಯುವಕನೋರ್ವನಿಗೆ ಬೆಂಕಿ ಹಚ್ಚಿ ಹತ್ಯೆಗೈದ ಕಿರಾತಕರು ಬೂದನೂರು ಗೇಟ್ ಬಳಿ ಇರುವ ಕಾಲುವೆ ಪಕ್ಕದ ಕಸದಲ್ಲಿ ಬಾಡಿ ಬಿಸಾಕಿ ಎಸ್ಕೇಪ್ ಆದ ಕಿಡಿಗೇಡಿಗಳು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬೂದನೂರು ಗೇಟ್ ಬಳಿ ನಡೆದ ಘಟನೆ.

ಮೃತ ಯುವಕನನ್ನು ನಗನೂರು ಗ್ರಾಮದ ನಾಗೇಶ (26) ಎಂದು ಗುರುತಿಸಲಾಗಿದೆ ಶುಕ್ರವಾರ ರಾತ್ರಿ ಹತ್ತು ಗಂಟೆ ಸಮಯದಲ್ಲಿ ಮನೆಯಿಂದ ಹೊರಗಡೆ ಹೋಗಿದ್ದ ಯುವಕ. ಇಂದು ಬೂದನೂರು ಗೇಟ್ ಬಳಿ ಶವವಾಗಿ ಪತ್ತೆ. ನಾಗೇಶ್ ಸಾವಿನ ಸುತ್ತ ಅನುಮಾನ ಇದ್ದು, ಯುವಕನ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಸಿಪಿಐ ಚನ್ನಯ್ಯ ಹಿರೇಮಠ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ‌.