ಹುಬ್ಬಳ್ಳಿ :

ಟ್ರ್ಯಾಕ್ಟರ್‌ಗೆ ಟ್ಯಾಂಕರ್‌ ಡಿಕ್ಕಿ, ಇಬ್ಬರು ಸಾವನಪ್ಪಿರುವ ಘಟನೆ ಹುಬ್ಬಳ್ಳಿಯ ಸಮೀಪದ ಬುಡರಸಿಂಗಿ ಕ್ರಾಸ್ ಬಳಿ ನಡೆದಿದೆ.

ಟ್ರ್ಯಾಕ್ಟರ್‌ಗೆ ಟ್ಯಾಂಕರ್‌ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಹಿಂದಿದ್ದ ಇಬ್ಬರು ಸಾವು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕಲ್ಮೇಶ ಯಂಕಮ್ಮನವರ (26) ಹಾಗೂ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಅಡವಿಸೋಮಾಪುರದ ಕಲ್ಮೇಶ ಜಾಧವ (26) ಮೃತರು. ಮುಂಡಗೋಡದ ವಿನಾಯಕ ಮಾನಾಬಾಯಿ ಎಂಬಾತ ಗಾಯ, ಕಿಮ್ಸ್‌ಗೆ ದಾಖಲು.

ಟ್ರ್ಯಾಕ್ಟರ್‌ ಪಂಚರ್‌ ಆಗಿದ್ದರಿಂದ ರಸ್ತೆ ಬದಿ ನಿಲ್ಲಿಸಿದ್ದರು ಬಾವುಸಾಹೇಬ ಡಾಕನೆ ಎಂಬಾತ ಟ್ಯಾಂಕರ್‌ ಚಲಾಯಿಸಿಕೊಂಡು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ. ಟ್ಯಾಂಕರ್ ಮೇಲಿನ ನಿಯಂತ್ರಣ ಕಳೆದುಕೊಂಡ ಚಾಲಕ ರಸ್ತೆಬದಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು