ರಾಮನಗರ :

ಹಿಂದಿ ಏರಿಕೆ ವಿರುದ್ಧ ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ರಾಮನಗರದ ಐಜೂರು ವೃತ್ತದಲ್ಲಿ ಪಂಜು ಹಿಡಿದು ಕನ್ನಡ ಚಳುವಳಿ ಹೋರಾಡಗಾರ ವಾಟಾಳ್ ನಾಗರಾಜ್ ಪ್ರತಿಭಟನೆ.

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ವಾಟಾಳ್. ಕರ್ನಾಟಕದಲ್ಲಿ ಕನ್ನಡಕ್ಕೆ ಭಾರಿ ಅಪಾಯ ಇದೆ. ಸರ್ಕಾರ ಹಿಂದಿ ಭಾಷೆ ಬಗ್ಗೆ ಪ್ರಮಾಣಿಕವಾಗಿ ಚಿಂತನೆ ಮಾಡಬೇಕಿದೆ.‌‌ ರಾಜ್ಯದ ಎಲ್ಲಾ ಬ್ಯಾಂಕ್‌ಗಳಲ್ಲಿ ಕನ್ನಡದಲ್ಲೇ ನಡೆಸಬೇಕು. ಕೇಂದ್ರದಿಂದ ಬರುವ ಯಾವುದೇ ಮಂತ್ರಿಗಳು ಕನ್ನಡದಲ್ಲೇ ಸಭೆ ನಡೆಸಬೇಕು.

ವಾಟಾಳ ನಾಗರಾಜ – ಕನ್ನಡ ಪರ ಹೋರಾಟಗಾರರು

ನವೆಂಬರ್ 21 ಹಿಂದಿ ವಿರೋಧಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು. ಅಂದು ಎಸ್‌ಬಿಐ ಬ್ಯಾಂಕ್ ನಿಂದ ಕೆಂಪೇಗೌಡ ರಸ್ತೆಯಲ್ಲಿ ಬೃಹತ್ ಪ್ರತಿಭಟನೆ. 21 ಕ್ಕೆ ಕರಳಾ ದಿನಾಚರಣೆ ಆಚರಿಸಲಾಗುವುದು. ಹಿಂದಿ ವಿರೋಧಿ ಹೋರಾಟಕ್ಕೆ ಬೆಂಬಲ ನೀಡಲು ವಾಟಾಳ್ ಮನವಿ ಮಾಡಿದ್ದು, ಹಿಂದಿ ಭಾಷೆ ಪ್ರದೇಶಿಕ ರಾಜ್ಯ ತುಳಿಯುವ ವ್ಯವಸ್ಥೆ ಇದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಹಿಂದಿ ಭಾಷೆಯನ್ನ ಒಪ್ಪಬಾರದು, ಆ ಭಾಷೆಯನ್ನ‌ ತಿರಸ್ಕರಿಸಬೇಕು ಎಂದು ಹೇಳಿದರು.