ಕೊಪ್ಪಳ :
ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುತ್ತಿರುವ ಹಿನ್ನೆಲೆಯಲ್ಲಿ ಸರಕಾರಿ ಶಾಲೆಯಿಂದ ಮಗನ ಟಿಸಿ ಪಡೆದ ತಂದೆ ಕೊಪ್ಪಳದ ವೀರಣ್ಣ ಕೋರ್ಲಹಳ್ಳಿ ಅವರು ತಮ್ಮ ಮಗ ಶರಣಬಸವಕಿರಣ ಅವರ ಟಿಸಿ ಪಡೆದಿದ್ದಾರೆ
ವೀರಣ್ಣ ಅಖಿಲ ಭಾರತ ಲಿಂಗಾಯತ್ ಮಹಾಸಭಾ ರಾಜ್ಯಾಧ್ಯಕ್ಷರಾಗಿದ್ದು ಇವರ ಮಗ ರೈಲ್ವೆ ನಿಲ್ದಾಣದ ಬಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೆಯ ತರಗತಿ ಓದುತ್ತಿದ್ದ. ಸರಕಾರಿ ಶಾಲೆಯಿಂದ ವರ್ಗಾವಣೆ ಪತ್ರ ಪಡೆದು ಖಾಸಗಿ ಶಾಲೆಗೆ ಸೇರಿಸಿದ ವೀರಣ್ಣ. ಸರಕಾರಿ ಶಾಲೆಯಲ್ಲಿ ಮೊಟ್ಟೆ ನೀಡುವದರಿಂದ ನನ್ನ ಧರ್ಮಕ್ಕೆ ವಿರೋಧವಿದೆ.
ಒಂದೆರೆಡು ದಿನ ನನ್ನ ಮಗ ಮೊಟ್ಟೆ ತಿನ್ನದೆ ಇರಬಹುದು. ಬೇರೆ ಮಕ್ಕಳು ತಿನ್ನೋದುವದನ್ನು ನೋಡಿ ನನ್ನ ಮಗನೂ ತಿನ್ನಬಹುದು. ಇದೇ ಕಾರಣಕ್ಕೆ ಸರಕಾರಿ ಶಾಲೆ ಬಿಡಿಸಿದ್ದೇನೆ. ಮಗನ ಟಿಸಿ ಪಡೆದ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವೀರಣ್ಣ ಕೋರ್ಲಹಳ್ಳಿ.