ಉ.ಕ ಸುದ್ದಿಜಾಲ ಸವದತ್ತಿ :

ಹಗಲಿನಲ್ಲಿ ಕಳ್ಳರು ಚಿಂದಿ ಆಯುವ ಹಾಗೂ ಭೀಕ್ಷೆ ಬೇಡುವ ನೆಪದಲ್ಲಿ ಗ್ರಾಮದಲ್ಲಿ ತಿರುಗಾಡಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಮನೆ ಕಳ್ಳತನ ಮಾಡಿದ ಬಗ್ಗೆ ಸವದತ್ತಿ ಪೋಲಿಸ್ ಠಾಣೆಯಲ್ಲಿ ಜ.6 ರಂದು ಸವದತ್ತಿ ತಾಲೂಕಿನ ಬೆಟಸೂರ ಗ್ರಾಮದ ನಿವಾಸಿ ಗುರಪ್ಪ ಬಸಪ್ಪ ಅಳಗೋಡಿ ಅವರು ಸವದತ್ತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಸವದತ್ತಿಯ ಯಲ್ಲಮ್ಮನಗುಡ್ಡದಲ್ಲಿ ಇಬ್ಬರೂ ಜನ ಆರೋಪಿತರಿಗೆ ಬಂಧಿಸಿ ಅವರಿಂದ ಸವದತ್ತಿ ಪೊಲೀಸ್‌ ಠಾಣಾ ವ್ಯಾಪ್ತಿಯ ಚುಳುಕಿ, ಬೆಟಸೂರ, ಚಿಕ್ಕಉಳ್ಳಿಗೇರಿಯಲ್ಲಿ ಕಳ್ಳತನವಾದ ಒಟ್ಟು 60 ಗ್ರಾಮ ಬಂಗಾರದ ಆಭರಣಗಳು ಹಾಗೂ 100 ಗ್ರಾಮ ಬೆಳ್ಳಿಯ ಮೂರ್ತಿಗಳು ಮತ್ತು 50,000/- ರೂ ಹಣವನ್ನು ಹೀಗೆ ಒಟ್ಟು 3,60,000/- ರೂ ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡಿದ್ದಾರೆ.

ಇದರಿಂದ ಸವದತ್ತಿ ಠಾಣೆಯ ಪ್ರಕರಣ ಪತ್ತೆಯಾಗಿದ್ದು, ಸದರಿ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದು ಇರುತ್ತದೆ. ಸವದತ್ತಿ ಪೊಲೀಸರ ಈ ಯಶಸ್ವಿ ಪತ್ತೆ ಕಾರ್ಯವನ್ನು ಮಾನ್ಯ ಪೋಲೀಸ ಅಧೀಕ್ಷಕರು ಬೆಳಗಾವಿ ಜಿಲ್ಲೆ ರವರು ಪ್ರಶಂಶಿಸಿದ್ದಾರೆ.