ಉ.ಕ ಸುದ್ದಿಜಾಲ ಬೆಳಗಾವಿ :
ಗಂಡ, ಮನೆಯವರ ಕಿರುಕುಳಕ್ಕೆ ಬೇಸತ್ತು ನೇಣಿಗೆ ಕೊರಳೊಡ್ಡಿದ ಪತ್ನಿ! ಮೃತ ಮಹಿಳೆಯ ಕುಟುಂಬಸ್ಥರ ಗಂಭೀರ ಆರೋಪ. ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ಘಟನೆ ನಡೆದಿದೆ.
ಸಾಂಬ್ರಾ ಗ್ರಾಮದ ಸವಿತಾ ಮಾರುತಿ ಜೋಗಾನಿ (32) ನೇಣಿಗೆ ಶರಣಾದ ಮಹಿಳೆ. ಮೂಲತಃ ರಾಕಸಕೊಪ್ಪ ಗ್ರಾಮದ ಮಾರುತಿ ಜೋಗಾನಿ(40), ಕುಟುಂಬಸ್ಥರ ವಿರುದ್ಧ ಆರೋಪ. ಕಳೆದ 2018ರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿಯೇ ಅದ್ಧೂರಿ ಮದುವೆಯಾಗಿದ್ದ ಜೋಡಿಗಳು.
ಮದುವೆಯಾದ ಒಂದು ವರ್ಷದ ನಂತರ ಪತಿ ಮಾರುತಿ, ಆತನ ಮನೆಯವರಿಂದ ನಿರಂತರ ಕಿರುಕುಳ ಆರೋಪ. ಕ್ಷುಲ್ಲಕ ಕಾರಣಕ್ಕೆ ಮನಬಂದಂತೆ ಗಂಡ ಮತ್ತು ಆತನ ಮನೆಯವರಿಂದ ಹಲ್ಲೆ ಆರೋಪ. ಇಬ್ಬರ ಐದು ವರ್ಷದ ಸುಖ-ಸಂಸಾರಕ್ಕೆ ನಾಲ್ಕು ವರ್ಷದ ಮುದಾದ ಗಂಡು ಹೆತ್ತಿದ್ದ ಸವಿತಾ.
ಪತಿ, ಅತ್ತೆ, ಮಾವ ನಾದನಿಯ ಕಿರುಕುಳದ ಬಗ್ಗೆ ಕುಟುಂಬಸ್ಥರ ಗಮನಕ್ಕೂ ತಂದಿದ್ದ ಸವಿತಾ. ಗಲಾಟೆಯಾದಗೊಮ್ಮೆ ಅನುಸರಿಸಿಕೊಂಡು ಹೋಗುವಂತೆ ಬುದ್ದಿವಾದ ಹೇಳಿದ್ದ ಪತ್ನಿ ಕುಟುಂಬಸ್ಥರು. ಆದರೂ ನಿರಂತರ ಕಿರುಕುಳ ಹಿನ್ನೆಲೆ ಮನೆಯಲ್ಲಿ ಯಾರೂ ಇಲ್ಲದಿರುವಾಗ ನೇಣಿಗೆ ಶರಣು.
ಮಗಳು ನೇಣು ಹಾಕಿಕೊಂಡಿಲ್ಲ ಗಂಡನೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆಂದು ಮೃತ ಮಹಿಳೆಯ ಸಹೋದರಿ ಆರೋಪ. ಮಾರಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ.