ಉ.ಕ ಸುದ್ದಿಜಾಲ ಬೆಳಗಾವಿ :
ಪಾರ್ಟಿ ಮಾಡಲು ಹೋಗಿದ್ದಾಗ ಈಜುಕೊಳದಲ್ಲಿ ಮುಳುಗಿ ಯುವಕ ಸಾವು ಬೆಳಗಾವಿ ಜಿಲ್ಲೆಯ ಕಣಕುಂಬಿ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ಘಟನೆ ಬೆಳಗಾವಿಯ ಖಾಸಭಾಗ ನಿವಾಸಿ ಮಹಾಂತೇಶ ಗುಂಜೀಕರ (26) ಮೃತ ಯುವಕ.
ಎಲ್‌ಜಿ ಕಂಪನಿಯ ಉದ್ಯೋಗಿ ಆಗಿದ್ದ ಮಹಾಂತೇಶ ಗುಂಜೀಕರ ಖಾಸಗಿ ರೆಸಾರ್ಟ್‌ಗೆ ತೆರಳಿದ್ದ ಎಲ್‌ಜಿ ಕಂಪನಿಯ ಬೆಳಗಾವಿ ಶಾಖೆಯ 22 ಜನ ಸಿಬ್ಬಂದಿ ನಿನ್ನೆ ಸಂಜೆ ಕಣಕುಂಬಿ ಬಳಿಯ ರೆಸಾರ್ಟ್‌ಗೆ ತೆರಳಿ ಇಂದು ಮರಳಬೇಕಿದ್ದ ಸಿಬ್ಬಂದಿ
ಇಂದು ಬೆಳಗ್ಗೆ ಈಜುಕೊಳದಲ್ಲಿ ಇಳಿದಿದ್ದ ಮಹಾಂತೇಶ ಗುಂಜೀಕರ ಸಾವು ಫೆಬ್ರುವರಿಯಲ್ಲಿ ಸಹೋದರಿ ಮದುವೆಗೆ ಸಿದ್ಧತೆ ಮಾಡಿಕೊಳ್ತಿದ್ದ ಮಹಾಂತೇಶ. ಬೆಳಗಾವಿಯ ಜಿಲ್ಲಾಸ್ಪತ್ರೆ ಎದುರು ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ.