ಕಾಗವಾಡ :

ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಗ್ರಾಮದ ಮನೆಗಳಿಗೆ ಮನೆಗಳ್ಳರು, ಸರಗಳ್ಳರು ದಾಳಿ ಮಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಗಡಿಭಾಗದಲ್ಲಿ ಕಳ್ಳತನವಾಗುತ್ತಿದ್ದರೂ ಈ ವರೆಗೂ ಮಾತ್ರ ಯಾವೊಬ್ಬ ಕಳ್ಳನನ್ನ ಪೋಲಿಸರು ಬಂಧಿಸಿಲ್ಲ ಹೀಗಾಗಿ ತಮ್ಮ ಗ್ರಾಮದ ಜನರಿಗೆ ತೊಂದರೆ ಆಗಬಾರದೆಂದು ಕೈಯಲ್ಲಿ ಬ್ಯಾಟು, ಸ್ಟಂಪು, ಕೊಲು‌ ಹಿಡಿದು ತಿರುಗಾಡುತ್ತಿರುವ ಗ್ರಾಮದ ಯುವಕರು.

ಯುವಕರೆಲ್ಲ ಒಗ್ಗಟ್ಟಾಗಿ ನಿಂತಿದ್ದು ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ. ಮೋಳೆ ಗ್ರಾಮದಲ್ಲಿ ಈ ವರೆಗೂ ಐದು‌ಕ್ಕೂ ಹೆಚ್ಚು ಮನೆ ಬಾಗಿಲು ಒಡೆದು ಸುಮಾರು‌12 ತೊಲೆ ಬಂಗಾರ, ಐದು ಕೆಜಿ ಬೆಳ್ಳಿ, ಹಾಗೂ ನಗದು ಹಣ ಕಳ್ಳತನ  ಮಾಡಿ ವಾರ ಕಳೆದಿದೆ. ಇದಾದ ಬಳಿಕ ರಸ್ತೆ ಪಕ್ಕದಲ್ಲಿ ನಿಂತಿದ್ದ ಮಹಿಳೆಯ ಕೊರಳಲ್ಲಿರುವ ಬಂಗಾರ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದಾರೆ.

ಮೋಳೆ ಗ್ರಾಮದ ಯುವಕರುಸರಣಿ‌ ಕಳ್ಳತನ ತಮ್ಮ ರಕ್ಷಣೆಗೆ ರಾತ್ರಿ ಗಸ್ತು ತಿರಗುತ್ತಿರುವ ಯುವಕರು

ಹೀಗೆ ಒಂದೇ ದಿನ ಹಲವಾರು‌ ಕಳ್ಳತನ ಪ್ರಕರಣಗಳು ನಡೆದಿವೆ. ಇದಷ್ಟೆ ಅಲ್ಲದೇ ಕಳ್ಳರು ದಿನಂಪ್ರತಿ ರಾತ್ರಿ ಮನೆಗಳಿಗೆ ಬಂದು ಬಾಗಿಲು ಬಡೆದು ಗ್ರಾಮಸ್ಥರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಇಷ್ಟೇಲ್ಲಾ ಆದರೂ ಕೂಡಾ ಗ್ರಾಮದಲ್ಲಿ ಪೋಲಿಸರು ಇಲ್ಲಾ. ರಾತ್ರಿ ಯಾರಾದರೂ ಬಾಗಿಲು ಬಡೆದ ವಿಷಯ ಪೋಲಿಸರಿಗೆ ತಿಳಿಸಿದಾಗ ಮಾತ್ರ ಆಗಮಿಸುತ್ತಿರುವ ಪೋಲಿಸರ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವೇಕ ಕರ್ಪೆ – ಸ್ಥಳೀಯರು

ಮೋಳೆ ಗ್ರಾಮದಲ್ಲಿ ಕಳ್ಳತನವಾಗಿ ಒಂದು ವಾರ ಕಳೆದರೂ ಕೂಡಾ ಕಳ್ಳನನ್ನ ಬಂಧಿಸುವಲ್ಲಿ ಅಥಣಿ ಹಾಗೂ‌ ಕಾಗವಾಡ ಪೋಲಿಸರು ವಿಫಲರಾಗಿದ್ದಾರೆ. ಈ ಬಗ್ಗೆ ಪೋಲಿಸ ಅಧಿಕಾರಿಗಳನ್ನ ವಿಚಾರಿಸಿದಾಗ ಇನ್ನೂ ತನಿಖೆ ನಡೆಯುತ್ತಿದೆ ಎಂದು ಹರಕೆ‌ ಉತ್ತರ ನೀಡುತ್ತಿದ್ದಾರೆ‌. ಒಂದು ವೇಳೆ ಕಳ್ಳರು ಕಳ್ಳತನ‌ ಮಾಡುವಾಗ ಏನಾದರೂ ಅಹಿತಕರ ಘಟನೆ ನಡೆದರೆ ಅದಕ್ಕೆ ಯಾರು ಜವಾಬ್ದಾರರು. ನಮ್ಮ ಗ್ರಾಮಕ್ಕೆ ಭದ್ರತೆ ನೀಡಿ ಎಂದು ಗ್ರಾಮಸ್ಥರು ಕೊರುತ್ತಿದ್ದಾರೆ.

ರಾಜು ಕನಾಳೆ – ಸ್ಥಳೀಯ

ಒಟ್ಟಾರೆಯಾಗಿ ಗಡಿ ಭಾಗದಲ್ಲಿರುವ ಮೋಳೆ‌, ಐನಾಪೂರ, ಕೆಂಪವಾಡ, ತಂಗಡಿ, ನವಲಿಹಾಳ, ಹೀಗೆ ಅನೇಕ ಗ್ರಾಮಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಿನ ಮನೆಗಳು ಕಳ್ಳತನವಾಗುತ್ತಿದ್ದರೂ ಕೂಡಾ ಪೋಲಿಸ ಇಲಾಖೆ ಕಳ್ಳರನ್ನ ಬಂಧಿಸುವಲ್ಲಿ ವಿಫಲರಾಗಿದ್ದು, ಕಳ್ಳರನ್ನ ಪೋಲಿಸರು ಹಿಡಿದು ಬಂಧಿಸುವುಸುದು ಯಾವಾಗ ಎಂದು ಗಡಿ ಭಾಗದ ಜನರು ಪ್ರಶ್ನಿಸುತ್ತಿದ್ದಾರೆ.