ಉ.ಕ ಸುದ್ದಿಜಾಲ ಕೊಡಗು :
ಸೇನಾ ವಾಹನ ಪ್ರಪಾತಕ್ಕೆ ಬಿದ್ದು ಗಾಯಗೊಂಡಿದ್ದ ಕೊಡಗಿನ ಯೋಧ ಸಾವು ಆಲೂರು ಸಿದ್ದಾಪುರದ ಸೈನಿಕ ದಿವಿನ್ (28) ಕೊನೆಯುಸಿರು ಜಮ್ಮು ಕಾಶ್ಮೀರದಲ್ಲಿ ನಡೆದಿದ್ದ ಸೇನಾ ವಾಹನ ಅಪಘಾತ.
ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ದಿವಿನ್ ಶ್ರೀನಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೆ ಯೋಧ ದಿವಿನ್ ಹುತಾತ್ಮ ದಿವಿನ್ ತಾಯಿ ಜಯ ಮೊನ್ನೆಯಷ್ಟೇ ಸೇನಾ ಆಸ್ಪತ್ರೆಗೆ ತಲುಪಿದ್ದರು.
ಈ ವೇಳೆ ಅಮ್ಮನ ಕರೆಗೆ ದಿವಿನ್ ಕಣ್ಣು ಬಿಡುವ ಪ್ರಯತ್ನ ಮಾಡಿದ್ದರು ಆದ್ರೆ ಶ್ವಾಸಕೋಶಕ್ಕೆ ತೀವ್ರ ಹಾನಿ ಆದ ಹಿನ್ನಲೆ. ಚಿಕಿತ್ಸೆ ಫಲಿಸದೆ ಇಂದು ದಿವಿನ್ ಕೊನೆಯುಸಿರು 10 ವರ್ಷದ ಹಿಂದೆ ಸೇನೆಗೆ ಸೇರಿದ್ದ ದಿವಿನ್ ಇತ್ತೀಚೆಗೆ ನಿಶ್ಚಿತಾರ್ಥ ಕೂಡ ನೆರವೇರಿತು.
2025 ರ ಫೆಬ್ರವರಿಯಲ್ಲಿ ದಿವಿನ್ ವಿವಾಹ ನಿಶ್ಚಯವಾಗಿತ್ತು. ಆದ್ರೆ ಸೇನಾ ವಾಹನ ಪ್ರಪಾತಕ್ಕೆ ಬಿದ್ದು ಐವರು ಸೈನಿಕರು ಸ್ಥಳದಲ್ಲೇ ಹುತಾತ್ಮರಾಗಿದ್ದರು.