ಉತ್ತರ ಕರ್ನಾಟಕ ಸುದ್ದಿಜಾಲ ಚಿತ್ರದುರ್ಗ:

ಎಲೆಕ್ಷನ್‌ಗೆ ಇನ್ನೂ ಒಂದು ವರ್ಷ ಇರುವಾಗಲೇ ಟಿಕೇಟ್‌ಗಾಗಿ ಲಾಭಿ, ಅಭ್ಯರ್ಥಿ ಪರ ಅಭಿಮಾನಿಗಳಿಂದ ದೇವರಿಗೆ ಪತ್ರ. ವಿಧಾನಸಭೆ ಚುನಾವಣೆಗೆ ಬಿಫಾರಂ ಕೊಡಿಸುವಂತೆ ದೇವರಿಗೆ ಪತ್ರ ಬರೆದ ಅಭಿಮಾನಿಗಳು.

ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಅಭ್ಯರ್ಥಿ ಸಾಸಲು ಸತೀಶ್ ಪರ ದೇವರಿಗೆ ಪತ್ರ. ಶಿರಾ/ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಆಕಾಂಕ್ಷಿ ಸಾಸಲು ಸತೀಶ್. ಸಾಸಲು ಭೂತಪ್ಪ ದೇವರಿಗೆ ಪತ್ರ ಬರೆದ ಅಭಿಮಾನಿಗಳು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಸಾಸಲು ಗ್ರಾಮದ ದೇವರು

ಸತೀಶ್ ಅಣ್ಣ ಗೆದ್ದರೆ ಬಾಡೂಟ ಹಾಕಿಸುವೆ ಎಂದು ಪತ್ರ ಬರೆದ ಅಭಿಮಾನಿಗಳು. ಕಳೆದ ಬಾರಿಯೂ ಚಿಕ್ಕನಾಯಕನಹಳ್ಳಿ ಕ್ಷೇತ್ರದ  ಟಿಕೇಟ್ ಆಕಾಂಕ್ಷಿಯಾಗಿದ್ದ ಸಾಸಲು ಸತೀಶ್ ಬಡ ಭಕ್ತನ ಕೋರಿಕೆ ಈಡೇರಿಸುವಂತೆ ದೇವರಲ್ಲಿ ಮನವಿ ಸತೀಶ್ ಅಭಿಮಾನಿಗಳಾದ ಶಿವು, ಕರಿಯಣ್ಣ, ಗಂಗಾಧರ್ ಎನ್ನುವವರಿಂದ ಪತ್ರ. ಪತ್ರ ಬರೆದು ಭೂತೇಶ್ವರ ದೇವಸ್ಥಾನದ ಮರಕ್ಕೆ ಹರಕೆ ಕಟ್ಟಿದ ಅಭಿಮಾನಿಗಳು.