ಉ.ಕ ಸುದ್ದಿಜಾಲ ನಿಪ್ಪಾಣಿ :
ಜೈನ ಮುಖಂಡ ಉದ್ಯಮಿ ರಾವಸಾಹೇಬ ಪಾಟೀಲ (80) ಇಂದು ಬೆಳಗ್ಗೆ ನಿಧನರಾಗಿದ್ದು ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.
ಅನಾರೋಗ್ಯದ ಹಿನ್ನಲೆ ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ರಾವಸಾಹೇಬ ಪಾಟೀಲ ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ತಮ್ಮ ಹುಟ್ಟುರಾದ ಬೊರಗಾಂವ ಪಟ್ಟಣದಲ್ಲಿ ಸಾಯಂಕಾಲ 5 ಗಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೊರಗಾಂವ ಗ್ರಾಮದ ಸುತ್ತ ಮೆರವಣಿಗೆ ಬಳಿಕ ಗಣ್ಯರ ಬೇಟಿಗೆ ಅನಕೂಲ ತದನಂತರ ಸಾಯಂಕಾಲ ಜೈನ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯಲಿದೆ.
ಪ್ರಸ್ತುತ ದಕ್ಷಿಣ ಭಾರತ ಜೈನ ಸಮಾಜದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ರಾವುಸಾಬ ಪಾಟೀಲ ಉದ್ಯಮದ ಜೊತೆಗೆ ಹಲವಾರು ಅರಿಹಂತ ಬ್ಯಾಂಕ ಶಾಖೆಗಳ ಸಂಸ್ಥೆ. ಅರಿಹಂತ ಉದ್ಯೋಗ ಸಮೂಹ ಸಂಸ್ಥಾಪಕ ಅಧ್ಯಕ್ಷರಾಗಿದ್ದರು ರಾವಸಾಹೇಬ ಪಾಟೀಲ.
ರಾವುಸಾಹೇಬ ಪಾಟೀಲ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಬೋರಗಾಂವ ಪಟ್ಟಣದಲ್ಲಿ ಜೈನ ಧರ್ಮದ ವಿಧಿ ವಿಧಾನಗಳಿಂದ ನಡೆಯಲಿದ್ದು ಕಾರ್ಯಕ್ರಮ ಪಟ್ಟಿ ಈ ಕೆಳಗಿನಂತಿದೆ…
- ಮಧ್ಯಾಹ್ನ 2 ಗಂಟೆಗೆ ಪಾರ್ಥಿವ ಶರೀರ ಬೋರಗಾಂವ ಪಟ್ಟಣದ ಸ್ವಗ್ರಹಕ್ಕೆ ಆಗಮನ.
- 2.30 ಗಂಟೆಗೆ ಬೋರಗಾಂವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ
- 3 ಗಂಟೆಗೆ ಪಾರ್ಥಿವ ಶರೀರದ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆ ಸಾಯಂಕಾಲ 5 ಗಂಟೆಗೆ ನಡೆಯಲಿದೆ