ಬೆಳಗಾವಿ ಜಿಲ್ಲೆಯ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಜನಿಸಿದ ಗಂಡು ನವಜಾತ ಶಿಶುವನ್ನ ನರ್ಸ್ ವೇಷದಲ್ಲಿ ಆಸ್ಪತ್ರೆಗೆ ಎಂಟ್ರಿ ಕೊಟ್ಟ ಅಪರಿಚಿತ ಮಹಿಳೆಯೊಬ್ಬಳು ಮಗುವನ್ನು ತೂಕಮಾಡಿಸುವುದಾಗಿ ತಾಯಿ ಮಡಿಲಿನಿಂದ ಕಳ್ಳತನ ಮಾಡಿ ಪರಾರಿಯಾಗಿದ್ದಾಳೆ.

ಅರ್ಧ ಘಂಟೆ ಕಳೆದರು ಮಗು ತಂದು ಕೊಡದ ನರ್ಸ ಬಗ್ಗೆ ಅನುಮಾನಗೊಂಡ ಪೋಷಕರು ಗಾಬರಿಗೊಂಡಾಗ ಆಸ್ಪತ್ರೆ ಸಿಬ್ಬಂದಿ ಎಚ್ಚೆತ್ತು ಅಥಣಿ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಬಸಗೌಡ ಕಾಗೆ – ವೈಧ್ಯಾಧಿಕಾರಿ ಅಥಣಿ


ಇನ್ನೂ ಸ್ಥಳಕ್ಕೆ ಆಗಮಿಸಿದ ಅಥಣಿ ಪಿಎಸ್ಐ ಶಿವಶಂಕರ ಮುಖರಿ ಮಗು ಕಳೆದುಕೊಂಡ ಪೋಷಕರಿಂದ ಮಾಹಿತಿ ಪಡೆದು ಆಸ್ಪತ್ರೆಯ ಸಿಸಿ ಕ್ಯಾಮರಾ ತಪಾಸಣೆ ನಡೆಸುತ್ತಿದ್ದಂತೆ ನರ್ಸ ವೇಷದಲ್ಲಿ ಬಂದ ಮಹಿಳೆಯೊಬ್ಬಳು ಆಸ್ಪತ್ರೆಗೆ ಎಂಟ್ರಿ ಕೊಟ್ಟಿರುವ ದೃಶ್ಯ ಕಂಡುಬಂದಿದೆ.

ಇನ್ನೂ ಸಿಸಿ ಟಿವಿ ಫೋಟೆಜ ಆಧರಿಸಿ ಕಳ್ಳಿಯನ್ನ ಹಿಡಿಯಲು ಅಥಣಿ ಪೋಲಿಸರು ಬಲೆ ಬೀಸಿದ್ದಾರೆ.