ಉ.ಕ ಸುದ್ದಿಜಾಲ‌ ಅಥಣಿ :

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನಲೆ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿ ನದಿ ತೀರದ ಜನರನ್ನ ಸ್ಥಳಾಂತರಕ್ಕೆ ಮುಂದಾದ ಅಧಿಕಾರಿಗಳು

ಸದ್ಯ ಕೃಷ್ಣಾ ನದಿ 1,75,000 ಕ್ಯೂಸೆಕ್ ಒಳ ಹರಿವಿದ್ದು‌ನದಿ ತೀರದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ‌. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮ ದ ಮಾಂಗ ತೋಟದ ವಸತಿಗಳಿಗೆ ಬೇಟಿ ನೀಡಿದ ಅಥಣಿ ತಾಲೂಕಾಧಿಕಾಗಳು.

ಅಥಣಿ ಡಿವೈಎಸ್‌ಪಿ ಶ್ರೀಪಾಲ ಜಲ್ಡೆ ನೇತೃತ್ವದಲ್ಲಿ ಕಾರ್ಯಾಚರಣೆ ಕೃಷ್ಣಾ ನದಿ ತೀರದ ಜನರಿಗೆ ತಿಳಿ ಹೇಳಿ ನದಿ ತೀರದ ಜನರ ಸ್ಥಳಾಂತರ ಅಥಣಿ ತಾಲೂಕಾ ದಂಡಾಧಿಕಾರಿ,‌ ಅಥಣಿ ಸಿಪಿಐ, ಪಿಎಸ್‌ಐ ನೇತೃತ್ವದಲ್ಲಿ ಕಾರ್ಯಾಚರಣೆ

ಈಗಾಗಲೇ ನದಿ ತೀರದ ಜನರಿಗೆ ಮನೆ ಸಾಮಗ್ರಿ ಹಾಗೂ ದನಕರಗಳನ್ನ ಸ್ಥಳಾಂತರಿಸಿ ಎಂದು‌ ಆದೇಶಿಸಲಾಗಿದೆ. ಹುಲಗಬಾಳ ಸೇರಿದಂತೆ ವಿವಿಧ ಗ್ರಾಮಗಳಿಗೆ ಪೋಲಿಸರು ಬೇಟಿ ನೀಡಿ ಸಾರ್ವಜನಿಕರಿಗೆ ಮನವರಿಕೆ‌ಮಾಡಿದ್ದಾರೆ.

ಸಾರ್ವಜನಿಕರು ಕೂಡಾ ಸ್ಪಂದನೆ ನೀಡಿ ದನ‌ಕರು ಹಾಗೂ ಮನೆ ಸಾಮಗ್ರಿಗಳನ್ನು ಸ್ಥಳಾಂತಿಸುತ್ತೆವೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.