ಉ.ಕ‌ ಸುದ್ದಿಜಾಲ ಕಲಬುರಗಿ :

ವಿದ್ಯಾರ್ಥಿನಿಯರ ಹಾಸ್ಟೆಲ್ ಬಾತ್ ರೂಮ್ ನಲ್ಲಿ ಕ್ಯಾಮರಾ ಇಟ್ಟ ಕಿರಾತಕ,ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ಕ್ಯಾಮರಾ ಇಟ್ಟು ವಿಕೃತಿ ಮೇರೆದ ಕಾಮುಕ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅಲ್ಪಸಂಖ್ಯಾತ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದೆ.

ಜೇವರ್ಗಿ ಪಟ್ಟಣದ ಶಾಂತಾ ನಗರದಲ್ಲಿರುವ ಹಾಸ್ಟೆಲ್, ಹಾಸ್ಟೇಲ್ ಇರುವ ಏರಿಯಾದಲ್ಲಿರುವ ಸಲೀಂ ಎಂಬ ವ್ಯಕ್ತಿಯಿಂದ ವಿಕೃತಿ. ಬಾತ್ ರೂಮ್ ನಲ್ಲಿ ಕ್ಯಾಮರಾ ಇಟ್ಟಿರೋದನ್ನ ಕಂಡ ವಿದ್ಯಾರ್ಥಿನಿಯರು.ಬಾತ್ ರೂಮ್ ನಿಂದ ಹೊರಬಂದು ಕಾಮುಕನನ್ನ ಹಿಡಿದ ವಿದ್ಯಾರ್ಥಿನಿಯರು…

ಕಾಮುಕನನ್ನ ಹಿಡಿದು ಥಳಿಸುವಾಗ ಸ್ಥಳೀಯರು ಬಂದು ಬಿಡಿಸಿ ಆರೋಪಿ ಎಸ್ಕೇಪ್ ಗೆ ಸಹಕಾರ. ಬಳಿಕ ತಹಶಿಲ್ದಾರ್ ಮತ್ತು ಜೇವರ್ಗಿ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳಿಯರು. ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಮನೆಯವರನ್ನ ವಿಚಾರಣೆ…

ಆರೋಪಿ ಮನೆಯವರನ್ನ ವಿಚಾರಣೆ ನಡೆಸಿದ ಬಳಿಕ ಆರೋಪಿಯನ್ನ ಕರೆಸಿದ ಮನೆಯವರು. ಕ್ಯಾಮರಾ ಇಟ್ಟ ಕಾಮುಕನನ್ನ ವಶಕ್ಕೆ ಪಡೆದ ಜೇವರ್ಗಿ ಪೊಲೀಸರು. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.