ಉ.ಕ ಸುದ್ದಿಜಾಲ ಹುಕ್ಕೇರಿ :

ಕರ್ನಾಟಕ ರಾಜ್ಯ ಸಾರಿಗೆ ಹಾಗೂ ಮಹಾರಾಷ್ಟ್ರ ಸಾರಿಗೆಯ  ಬಸ್‌ ಮೇಲೆ ಕಲ್ಲು ತೂರಾಟ, ಸರ್ಕಾರಿ ಬಸ್ ಮೇಲೆ ಅಪರಿಚಿತನಿಂದ ಕಲ್ಲೆಸೆತ, ಪ್ರಯಾಣಿಕನಿಗೆ ಗಾಯ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆನಕನಹೊಳಿ ಗ್ರಾಮದ ಬಳಿ ಘಟನೆ

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಮೇಲೆ ಅಪರಚಿತ ಕಿಡಿಗೇಡಿಗಳಿಂದ ಕಲ್ಲು ತೂರಾಟ. ಹುಕ್ಕೇರಿ – ಬೆಳಗಾವಿ ಮಾರ್ಗ ಮಧ್ಯೆ ಸಂಚರಿಸುವ NWKRTC, ಬಸ್ ಮೇಲೆ ಕಲ್ಲು ತೂರಾಟ, ಕೆಎ 42 F 962 ಸಂಖ್ಯೆಯ NWKRTC ಬಸ್ ಮೇಲೆ ಕಲ್ಲೆಸೆತ. ಬಸ್‌ನಲ್ಲಿದ್ದ ಪ್ರಯಾಣಿಕ ರಮೇಶ್ ಚಿವಟೆ (55)ಗೆ ಗಾಯ.

ಮಹಾರಾಷ್ಟ್ರ ಸಾರಿಗೆಯ ಮುಂಬೈ – ಹುಬ್ಬಳ್ಳಿ ಬಸ್ ಮೇಲೆ ಕಲ್ಲು ತೂರಾಟ ಕಲ್ಲು ತೂರಿದ ಪರಿಣಾಮ ಬಸ್ ಗಳ ಗಾಜುಗಳಿಗೆ ಹಾನಿ ಕರ್ನಾಟಕ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಪ್ರಯಾಣಿಕನಿಗೆ ಗಾಯ

ಸ್ಥಳಕ್ಕೆ ಯಮಕನಮರಡಿ ಪೊಲೀಸರು ಹಾಗೂ ಬೆಳಗಾವಿ ಎಸ್‌ಪಿ ಭೀಮಾಶಂಕರ ಗುಳೇದ್ ಬೇಟಿ ನೀಡಿ ಪರಿಶೀಲನೆ, ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.