ಉ.ಕ‌ಸುದ್ದಿಜಾಲ ಬೆಳಗಾವಿ :

ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಬೆಳಗಾವಿಯ ಸುವರ್ಣಸೌಧ ಮುತ್ತಿಗೆ ಡಿಸೆಂಬರ್ 19 ಕ್ಕೆ ರಾಜ್ಯ ರೈತ ಸಂಘ- ಹಸಿರು ಸೇನೆ ಸಂಘಟನೆಯಿಂದ ಸುವರ್ಣಸೌಧ ಮುತ್ತಿಗೆಗೆ ನಿರ್ಧಾರ‌ ಬೆಳಗಾವಿಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾಹಿತಿ

ರಾಜ್ಯದ 10 ಸಾವಿರಕ್ಕೂ ಅಧಿಕ ರೈತರಿಂದ ಸುವರ್ಣಸೌಧ ಮುತ್ತಿಗೆಗೆ ನಿರ್ಧಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬರೀ ಸುಳ್ಳನ್ನೇ ಹೇಳುತ್ತಿದ್ದಾರೆ ಈ ಅಧಿವೇಶನದೊಳಗೆ ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯಬೇಕು ಎಂದು ಆಗ್ರಹಿಸುತ್ತೇವೆ.

ಇಲ್ಲವಾದರೆ ಸುವರ್ಣ ಸೌಧ ಮುತ್ತಿಗೆ ಹಾಕಿ ನಾವು ಹೋರಾಟ ಮಾಡಬೇಕಾಗುತ್ತದೆ ಸರ್ಕಾರದ ನೀತಿಗಳಿಂದ ಬೇಸತ್ತು  ರೈತರು ಹಳ್ಳಿಗಳನ್ನು ಖಾಲಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ನೀವು ಕೊಟ್ಟ ಮಾತಿನಂತೆ ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯಬೇಕು ಎಂಬುದು ನಮ್ಮ ಮನವಿ

ಇಲ್ಲವಾದರೆ ನಾವು ಮುಂದಿನ ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ ಕಬ್ಬಿಗೆ ಎಫ್ಆರ್‌ಪಿ ಬದಲು ಎಸ್‌ಎಪಿ ದರ ನಿಗದಿ ಮಾಡಬೇಕು ಎಂಬುದು ನಮ್ಮ ಒತ್ತಾಯವಿದೆ. ಎಫ್ಆರ್‌ಪಿ ಜಾರಿಯಿಂದ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ರಾಜ್ಯದ ಎಲ್ಲ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಖರೀದಿ ಕೇಂದ್ರ ‌ತೆರೆಯಬೇಕು

ಸರ್ಕಾರಿ ರಜೆ ದಿನ ಹೊರತುಪಡಿಸಿ ವರ್ಷಪೂರ್ತಿ ರಾಗಿ ಕೇಂದ್ರಗಳು ತೆರೆದಿರಬೇಕು ಭತ್ತ, ರಾಗಿ, ಹೆಸರು, ತೊಗರಿ ಬೆಳೆಗಳಿಗೆ ಸರ್ಕಾರವೇ ಯೋಗ್ಯದರ ನಿಗದಿ ಮಾಡಬೇಕು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿನಾಥನ್ ವರದಿ ಜಾರಿಗೆ ತರುತ್ತೇವೆ ಎಂದಿದ್ದರು

ಆದರೆ ಈವರೆಗೆ ಸ್ವಾಮಿನಾಥನ್ ವರದಿ ಜಾರಿಗೆಯಾಗಿಲ್ಲ. ಪ್ರಕೃತಿ ವಿಕೋಪದ ನಿಧಿ  ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಬೆಳಗಾವಿಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿಕೆ.