ಉ.ಕ ಸುದ್ದಿಜಾಲ ಮಹಾರಾಷ್ಟ್ರ :

ಡಾ.ಬಿ ಆರ್ ಅಂಬೇಡ್ಕರ್, ಮಹಾತ್ಮ ಜ್ಯೋತಿಬಾ ಪುಲೆ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ ಹಿನ್ನಲೆ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ‌ಪಾಟೀಲ ಮುಖಕ್ಕೆ ಕಪ್ಪು ಮಸಿ ಮಹಾರಾಷ್ಟ್ರದ ಪುಣೆಯಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ‌

ಪುಣೆಯ ಕಾರ್ಯಕರ್ತನೋರ್ವನ ಮನೆಗೆ ತೆರಳಿ ಹೊರಬರುತ್ತಿದ್ದ ಚಂದ್ರಕಾಂತ ಪಾಟೀಲ್ ಭದ್ರತಾ ಸಿಬ್ಬಂದಿ ಇದ್ದರೂ ಚಂದ್ರಕಾಂತ ಪಾಟೀಲ ಮುಖಕ್ಕೆ ಮಸಿ ಎರಚಿ ಪರಾರಿಯಾಗಲು ಯತ್ನಿಸಿದ ವ್ಯಕ್ತಿ ವಶಕ್ಕೆ ಪಡೆಯಲಾಗಿದೆ.

ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಪುಳೆ ಭಿಕ್ಷಾಟನೆ ಮಾಡಿ ಶಾಲೆಗಳನ್ನು ಕಟ್ಟಿಸಿದ್ದರು ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದ ಸಚಿವ ಚಂದ್ರಕಾಂತ ಪಾಟೀಲ್ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದ ದಲಿತಪರ ಸಂಘಟನೆಗಳು ಬಳಿಕ ತಮ್ಮ ಹೇಳಿಕೆಗೆ ಕ್ಷಮೆಯಾಚನೆ ಮಾಡಿದ್ದ ಸಚಿವ ಚಂದ್ರಕಾಂತ ಪಾಟೀಲ್.

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ‌ಪಾಟೀಲ ಮುಖಕ್ಕೆ ಕಪ್ಪು ಮಸಿ

ಕ್ಷಮೆಯಾಚನೆ ಬಳಿಕವೂ ಚಂದ್ರಕಾಂತ ಪಾಟೀಲ್ ಮುಖಕ್ಕೆ ಕಪ್ಪು ಮಸಿ ಈ ರೀತಿ ಘಟನೆಗಳಿಗೆ ನಾನು ಹೆದರಲ್ಲ ಕ್ಷಮೆಯಾಚನೆ ಬಳಿಕವೂ ಈ ರೀತಿಯ ಘಟನೆ ನಡೆದಿದೆ. ಪೊಲೀಸ್ ಭದ್ರತೆ ಇಲ್ಲದೇ ಬರ್ತೀನಿ ಧಮ್ ಇದ್ರೆ ಎದುರು ಬನ್ನಿ

ಇದು ನಮ್ಮ ಸಂಸ್ಕೃತಿ ಅಲ್ಲ, ಇದನ್ನ ಮಹಾರಾಷ್ಟ್ರ ಸರ್ಕಾರ ಸಹಿಸಲ್ಲ ನಾನು ಪೊಲೀಸರ ಮೇಲೆ ದೂಷಿಸಲ್ಲ. ನಾನು ಹೆದರಲ್ಲ, ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ ಈ ರೀತಿಯ ಘಟನೆ ಡಾ.ಬಿ.ಆರ್.ಅಂಬೇಡ್ಕರ್ ಗೆ ಮಾಡಿದ ಅಪಮಾನ ಎಂದ ಸಚಿವ ಚಂದ್ರಕಾಂತ ಪಾಟೀಲ ಹೇಳಿದ್ದಾರೆ.