ಉ.ಕ ಸುದ್ದಿಜಾಲ ಚಿಕ್ಕೋಡಿ :

ಸಚಿವ ಸತೀಶ್ ಜಾರಕಿಹೋಳಿ ಪುತ್ರಿ ಪ್ರೀಯಂಕಾ ಜಾರಕಿಹೋಳಿಗೆ ಚಿಕ್ಕೋಡಿ ಲೋಕಸಭೆ ಟಿಕೇಟ್ ಹಿನ್ನಲೆ, ಜಾರಕಿಹೋಳಿ ಕುಟುಂಬದ ವಿರುದ್ದ ರೆಬೆಲ್ ಆದ ಶಂಭು ಕಲ್ಲೋಳಿಕರ.

ಮಾಜಿ IAS ಅಧಿಕಾರಿ ರಾಯಬಾಗ ಕ್ಷೇತ್ರದ ಪರಾಜಿಜಿತ ಅಭ್ಯರ್ಥಿಯಾದ ಶಂಭು ಕಲ್ಲೋಳಿಕರ ಪ್ರಚಾರಕ್ಕೆ ಮುನ್ನವೇ ಚಿಕ್ಕೋಡಿಯಲ್ಲಿ ಜಾರಕಿಹೋಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಿಯಂಕಾ ಜಾರಕಿಹೋಳಿ ಸೋಲಿಸಲು ರಣತಂತ್ರ ರೂಪಿಸಲು ಮುಂದಾದ ಸತೀಶ್ ವಿರೋಧಿ ಬನ.

ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಶುಂಭು ಕಲ್ಲೋಳಿಕರ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಸಹೋದರ ಮಾವ ಕೂಡ ಆಗಿರುವ ಶಂಭು ಜಾರಕಿಹೋಳಿ ಕುಟುಂಬದ ವಿರುದ್ಧ ಸಭೆ ನಡೆಸಿರುವ ಕಲ್ಲೋಳಿಕರ ಹಾಗೂ ಕಾರ್ಯಕರ್ತರು

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಸಭೆ ನಡೆಸಿ ಚರ್ಚೆ ಮಾಡಿದ್ದಾರೆ ಕಾರ್ಯಕರ್ತರನ್ನ ಕಡೆಗಣಿಸಿ ಜಾರಕಿಹೋಳಿ ಕುಟುಂಬ ಬೆಳೆಯಲು ಟಿಕೇಟ್ ನೀಡಲಾಗಿದೆ. ಅರ್ಹತೆ ಇಲ್ಲದ ಅಭ್ಯರ್ಥಿಗಳನ್ನ ಕಾಂಗ್ರೆಸ್ ಪಕ್ಷ ಚುನಾವಣೆಗೆ ನಿಲ್ಲಿಸಿದೆ. ಕುಟುಂಬ ರಾಜಕೀಯದ ವಿರುದ್ದ ಹೊರಾಡಲು ಬೆಂಬಲಿಗರ ಸಭೆ ಎಂದ ಶಂಭು ಕಲ್ಲೋಳಿಕರ

ಹಣ ಬಲ, ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಪುತ್ರಿಗೆ ಟಿಕೇಟ್ ನೀಡಿದ್ದಾರೆ ಎಂದು ಕಿಡಿ ಕಾರಿದ ಶಂಭು ಕಲ್ಲೋಳಿಕರ ಮತ್ತೊಮ್ಮೆ ಕಾರ್ಯಕರ್ತರ ಸಭೆ ನಡೆಸಿ ಯಾರ ಪರ ನಿಲ್ಲಬೇಕು ಎಂದು ತೀರ್ಮಾನ ಮಾಡುವುದಾಗಿ ಕಲ್ಲೋಳಿಕರ ಹೇಳಿದ್ದಾರೆ.