ಉ.ಕ ಸುದ್ದಿಜಾಲ ಅಥಣಿ :

ಇಡೀ ಕರ್ನಾಟಕ ರಾಜ್ಯದಲ್ಲಿ ಸುಮಾರು 30 ಲಕ್ಷಕ್ಕೂ ಅಧಿಕ ಪ್ರಮಾಣದಲ್ಲಿ ಇರುವ ಮಾಳಿ/ಮಾಲಗಾರ ಸಮಾಜ ಜಾತಿ, ಆದಾಯ ಪ್ರಮಾಣಪತ್ರ ಹಾಗೂ ಸಿಂಧುತ್ವ ಪ್ರಮಾಣ ಪತ್ರ ವಿತರಿಸುವಾಗ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿವೆ ಕೂಡಲೇ ಈ ಸಮಸ್ಯೆ ನಿವಾರಿಸಿ ಎಂದು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು.

ಅಖಿಲ ಕರ್ನಾಟಕ ಮಾಳಿ ಸಮಾಜ ಸೇವಾ ಸಂಘದ ವತಿಯಿಂದ ಮಾಳಿ/ಮಾಲಗಾರ ಸಮಾಜ ನಿಯೋಗ ಸಮಿತಿಯಿಂದ ಮನವಿ ಸಲ್ಲಿಸಿ ಮಾಳಿ/ಮಾಲಗಾರ ಅಭಿವೃದ್ಧಿ ನಿಗಮ ಸ್ಥಾಪಿಸಿ, ಕಳೆದ ಬಜೆಟ್ಟಿನಲ್ಲಿ ಘೋಷಿಸಿದ ಕಾರ್ಯಗಳನ್ನು ಅನುಷ್ಠಾನಗೊಳಿಸಿ, ಮಾಳಿ ಸಮುದಾಯಕ್ಕೆ ಪ್ರತ್ಯೇಕವಾಗಿ ಅನುದಾನವನ್ನು ಮೀಸಲಿರಿಸಿ, ಜಾತಿ, ಸಿಂಧುತ್ವ ಪ್ರಮಾಣ ಪತ್ರ ನೀಡುವಲ್ಲಿ ಆಗುತ್ತಿರುವ ಸಮಸ್ಯೆಯನ್ನು ನಿವಾರಿಸಿ ಸರಳೀಕೃತಗೊಳಿಸಿ, ಸಮಾಜದ ಚಟುವಟಿಕೆಗಳಿಗಾಗಿ ಬೆಂಗಳೂರು ಸೇರಿದಂತೆ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಕನಿಷ್ಠ 2 ಎಕರೆ ಜಮೀನು ಮಂಜೂರು ಮಾಡಿ, ಕಲಬುರ್ಗಿ ಜಿಲ್ಲೆಯ ನೀಲೂರು ನಿಂಬೆಕ್ಕದೇವಿ ದೇವಸ್ಥಾನ ಅಭಿವೃದ್ಧಿಗೆ 25 ಕೋಟಿ ರೂ ಬಿಡುಗಡೆ ಮಾಡಿ ಎಂದು ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಸಚಿವರು ಶೀಘ್ರ ದೇವರಾಜ ಅಭಿವೃದ್ದಿ ನಿಗಮ ಮಂಡಳಿ ಅಧಿಕಾರಿಗಳ ಜೊತೆ ಮಾಳಿ ಸಮಾಜದ ಸಭೆ ಕರೆದು ಈ ವಿಷಯಗಳನ್ನು ಚರ್ಚಿಸಿ ನಿಮ್ಮ ಸಮಾಜಕ್ಕೆ ನ್ಯಾಯ ಕೊಡಿಸುವ ಭರವಸೆ ನೀಡಿದರು. ಈ ವೇಳೆ ಮಾಳಿ ಸಮಾಜದ ಸಿ ಬಿ ಕುಲಗೋಡ, ಬಸವರಾಜ ಬಾಳಿಕಾಯಿ, ಗಿರೀಶ ಬುಟಾಳಿ, ಅಶೋಕ ಲಿಂಬಿಗಿಡದ, ಸುಭಾಶ ಮಾಳಿ, ಗಿರೀಶ ದಿವಾನಮಳ, ರವಿ ಬಡಕಂಬಿ, ರಮೇಶ ಮಾಳಿ, ಧರೆಪ್ಪ ಮಾಳಿ, ರಮೇಶ ಮಾಳಿ, ನೀಲಪ್ಪ ಕಿವಟಿ, ಮಲ್ಲಿಕಾರ್ಜುನ ವಣದೆ, ಮಹಾಂತೇಶ ಮಾಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.