ಉ.ಕ ಸುದ್ದಿಜಾಲ ಅಥಣಿ :

ಬೆಳಗಾವಿ ಜಿಲ್ಲೆಯ ಅಥಣಿ ವಿಧಾನಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೇಟ್‌ಗಾಗಿ ಬಾರಿ‌ ಪೈಪೋಟಿ ನಡೆದಿದ್ದು ಪೋಲಿಸ್ ಅಧಿಕಾರಿ, ಸನ್ಯಾಸಿ, ಗುತ್ತಿಗೆದಾರ, ಉದ್ಯಮಿದಾರ ಹಾಗೂ ರಿಯಲೆಸ್ಟೆಟ ಹೀಗೆ ಐವರಲ್ಲಿ ಕಾಂಗ್ರೆಸ್ ಟಿಕೇಟ್ ಪೈಟ್ ನಡೆದಿದ್ದು ಈ ಐವರಲ್ಲಿ ಯಾರಿಗೆ ಕಾಂಗ್ರೆಸ್ ಟಿಕೇಟ್ ಸಿಗುತ್ತೆ ಅನುವುದೆ ಕೂತುಹಲವಾಗಿದೆ.

ಹೌದು ಅಥಣಿ ವಿಧಾನಸಭಾ ಮತಕ್ಷೇತ್ರದಲ್ಲಿ ಸದ್ಯ ಬಿಜೆಪಿ ಶಾಸಕ‌ ಮಹೇಶ ಕುಮಟಳ್ಳಿ ಇದ್ದು ಬಿಜೆಪಿಯಲ್ಲೂ ಕೂಡಾ ಟಿಕೇಟ್‌ಗಾಗಿ ಪೈಟ್ ನಡೆದಿದೆ. ಮಹೇಶ ಕುಮಟಳ್ಳಿ ಹಾಗೂ ಲಕ್ಷ್ಮಣ ಸವದಿ ಒಂದು ಕಡೆ ಟಿಕೇಟ್‌ಗಾಗಿ ಒಳಗೊಳಗೆ ಪೈಟ್ ನಡೆಯುತ್ತಿವೆ.

ಕಾಂಗ್ರೆಸ್‌ನಲ್ಲೂ ಕೂಡಾ ತೀವ್ರ ಪೈಪೋಟಿ ನಡೆದಿದ್ದು ತಮ್ಮ ಪೋಲಿಸ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶ ಮಾಡಿದ ಬಸವರಾಜ ಬಿಸನಕೊಪ್ಪ, ಉದ್ಯಮಿ, ಬಸವರಾಜ ಬುಟಾಳೆ, ಗುತ್ತಿಗೆದಾರ ಧರೆಪ್ಪ ಠಕ್ಕನ್ನವರ, ರಿಯಲೆಸ್ಟೆಟ್ ಗಜಾನನ ಮಂಗಸೂಳಿ ಈ ನಾಲ್ವರು ಕಾಂಗ್ರೆಸ್ ಟಿಕೇಟ್‌ ಪಡೆಯುವ ರೆಸ್‌ನಲ್ಲಿ ಓಡಾಟದ ಮದ್ಯ

ಈಗ ಸನ್ಯಾಸಿಯೊಬ್ಬರು ಈಗೆ ಟಿಕೇಟ್ ನೀಡಿ ಎಂದು ಕಾಂಗ್ರೆಸ್ ಅಧ್ಯಕ್ಷ ಡಿ ಜೆ ಶಿವಕುಮಾರ ಬಳಿ ಸನ್ಯಾಸಿ ಶಶಿಕಾಂತ ಪಡಸಲಗಿ ಮನವಿ ಮಾಡಿದ್ದಾರೆ. ನನಗೆ ಒಂದು ವೇಳೆ ಟಿಕೇಟ್ ನೀಡದೆ ಹೋದರೆ ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ.

ಈಗಾಗಲೇ ಅಥಣಿ ಮತಕ್ಷೇತ್ರದಲ್ಲಿ ಮಾಜಿ‌ ಡಿಸಿಎಂ ತಮ್ಮದೇ ಆದ ವರ್ಚಸ್ಸ ಹೋಂದಿದ್ದು, ಬಿಜೆಪಿಯಿಂದ ಮಹೇಶ ಕುಮಟಳ್ಳಿಗೊ, ಡಿಸಿಎಂ ಲಕ್ಷ್ಮಣ ಸವದಿಗೊ ಕಾಯ್ದು ನೋಡಬೇಕಿದೆ. ಇ‌ನ್ನೂ ಕಾಂಗ್ರೆಸ್‌ನಿಂದ ಪ್ರಬಲವಾಗಿ ಐವರು ಗುರತಿಸಿಕೊಡಿದ್ದು, ಈ ಐವರಲ್ಲಿ‌ ಯಾರಿಗೆ ಟಕೇಟ್ ಸಿಗುತ್ತೆ ಎನ್ನುವುದು ಈಗ ಯಕ್ಷ ಪ್ರಶ್ನೆಯಾಗಿದೆ.

ಒಟ್ಟಿನಲ್ಲಿ ಅಥಣಿ‌ ಮತಕ್ಷೇತ್ರದ ಮತದಾರ ಪ್ರಭುಗಳಲ್ಲಿ‌ ಗೊಂದಲವಾಗಿದು ಎರಡು‌ ಪಕ್ಷದಲ್ಲಿ ಯಾರು‌ ಸ್ಪರ್ಧೆ ಮಾಡುತ್ತಾರೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಈ ಎರಡು‌ ಪಕ್ಷದಿಂದ ಯಾರಿಗೆ ಟಿಕೇಟ್ ಸಿಗುತ್ತೆ ಎಂಬುವುದು ಮತದಾರರು ಕಾಯ್ದು ನೋಡಬೇಕಿದೆ.