ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ತಡೆಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ. ಬೆಳಗಾವಿ ನಗರದಲ್ಲಿ ಅಕ್ರಮ ದಂಧೆಗಳಲ್ಲಿ ತೊಡಗಿದ್ದ ಆರೋಪದ ಮೇರೆಗೆ 5 ಜನರ ಗಡಿಪಾರು.
ಡಿಸಿಪಿ, ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ರವೀಂದ್ರ ಗಡಾದಿ ಅವರು ಆದೇಶ ಹೊರಡಿಸಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಖಂಜರ್ ಗಲ್ಲಿಯ, ಮಹಮ್ಮದಶಫಿ ತಹಶೀಲ್ದಾರ (68), ಇಜಾರಅಹ್ಮದ್ ನೇಸರಿಕರ (48), ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗ್ಯಾಂಗ್ ವಾಡಿಯ ಜಾನಿ ಜಯಪಾಲ್ ಲೊಂಡೆ (36),
ಕಣಬರಗಿ ಪಾಟೀಲ ಗಲ್ಲಿಯ, ಬೈರಗೌಡ ಜ್ಯೋತಿಬಾ ಪಾಟೀಲ (45). ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಹಾಪುರ ಖಾಡೆಬಜಾರ್‌ನ, ನಿತೀನ್ ಪಾಡುರಂಗ ಫೆಡ್ನೇಕರ್ (50) ಮಟಕಾ, ಅಕ್ರಮ ಜೂಜಾಟ, ಅಕ್ರಮ ಸಾರಾಯಿ ಮಾರಾಟ ಸೇರಿದಂತೆ ವಿವಿಧ ಕಾನೂನು ಬಾಹೀರ ಚಟುವಟಿಕೆಗಳಲ್ಲಿ ಭಾಗಿ.
ಬೆಳಗಾವಿ ಜಿಲ್ಲೆಯಿಂದ ಬಳ್ಳಾರಿ, ಕೊಪ್ಪಳ ಹಾಗೂ ವಿಜಯಪುರ ಜಿಲ್ಲೆಗೆ ಐವರನ್ನು ಗಡಿಪಾರು ಮಾಡಲಾಗಿದೆ.