ಉ.ಕ ಸುದ್ದಿಜಾಲ ಬೆಳಗಾವಿ :

ಕಬ್ಬು ಬೆಳೆಯುವ ರೈತರಿಗೆ ತೂಕದಲ್ಲಿ ಕಾರ್ಖಾನೆಯಿಂದ ಮೋಸ ಆರೋಪ ಹಿನ್ನಲೆ ಉತ್ತರ ಕರ್ನಾಟಕದ 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ಪರಿಶೀಲನೆ. ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರಿಂದ ದಾಳಿ.

ಬೆಳಗಾವಿ ಜಿಲ್ಲೆಯ 8, ಬಾಗಲಕೋಟ ಜಿಲ್ಲೆಯ 4, ವಿಜಯಪುರ ಜಿಲ್ಲೆಯ 4, ಕಲಬುರಗಿ, ಬೀದರ ಜಿಲ್ಲೆಯ 2, ಕಾರವಾರದ ಒಂದು ಕಾರ್ಖಾನೆಯ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ ಅಧಿಕಾರಿಗಳು. ಸಕ್ಕರೆ ಆಯುಕ್ತ ಶಿವಾನಂದ ಕಲಕೇರಿ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ 7 ರಿಂದ ಪರಿಶೀಲನೆ ಕಾರ್ಯ ನಡೆದಿದೆ.

ಸತೀಶ ಜಾರಕಿಹೊಳಿ ಮಾಲೀಕತ್ವದ ಬೆಳಗಾಂ ಶುಗರ್ಸ್. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾಲೀಕತ್ವದ ಹರ್ಷ ಶುಗರ್ಸ್. ಕತ್ತಿ ಸಹೋದರ ವಿಶ್ವರಾಜ್ ಶುಗರ್ಸ್ ಮೇಲೆ ದಾಳಿ. ಸಚಿವ ಮುರುಗೇಶ ನಿರಾಣಿ ಮಾಲೀಕತ್ವದ ನಿರಾಣಿ ಶುಗರ್ಸ್ ಕಾರ್ಖಾನೆಯ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ ಅಧಿಕಾರಿಗಳು.