ಉ.ಕ ಸುದ್ದಿಜಾಲ ಹುಕ್ಕೇರಿ :
ದಿಢೀರ ರಾಜಕೀಯ ಬೆಳವಣಿಗೆಯಲ್ಲಿ ಹೀರಣ್ಯಕೇಶಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸ್ಥಾನಕ್ಕೆ ಹುಕ್ಕೇರಿ ಶಾಸಕ ನಿಖೀಲ ಕತ್ತಿ ರಾಜೀನಾಮೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೀರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನ ಲೀಸ್ ನೀಡುವ ನಿರ್ಧಾರಕ್ಕೆ ಆಡಳಿತ ಮಂಡಳಿ ವಿರೋಧದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಾಸಕ ನಿಖೀಲ ಕತ್ತಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಮಾಜಿ ಸಂಸದ ರಮೇಶ ಕತ್ತಿ ಕುಟುಂಬಕ್ಕೆ ಸಕ್ಕರೆ ಕಾರ್ಖಾನೆ ಲೀಸ್ ಕೊಡಲು ರಮೇಶ ಕತ್ತಿ ಒತ್ತಾಯಿಸುತ್ತಿದ್ದರು ಎನ್ನಲಾಗುತ್ತಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಆಡಳಿತ ಮಂಡಳಿ ಸದಸ್ಯರು ರಮೇಶ ಕತ್ತಿ ಹಾಗೂ ಅವರ ಪುತ್ರರು ಕಾರ್ಖಾನೆಗೆ ಬರದಂತೆ ಕಡಿವಾಣ ಹಾಕಿದ್ದರು.
ಇಷ್ಟು ದಿನಗಳ ಕಾಲ ಕತ್ತಿ ಕುಟುಂಬದಲ್ಲಿ ಹಿಡಿತದಲ್ಲಿದ್ದ ಅಧಿಕಾರದ ಚುಕ್ಕಾಣಿಯನ್ನ ಆಡಳಿತ ಮಂಡಳಿಯವರು ಸಧ್ಯ ಟೇಕ್ ಒವರ್ ಮಾಡಿದ್ದು ಸಕ್ಕರೆ ಕಾರ್ಖಾನೆಯಲ್ಲಿನ ದುಂದು ವೆಚ್ಚಗಳ ಕಡಿವಾಣ ಸೇರಿದಂತೆ ಅನವಶ್ಯಕ ಕಾಮಗಾರಿಗಳಿಗೆ ಬ್ರೇಕ್ ಹಾಕಿ ವ್ಯವಸ್ಥಿತವಾಗಿ ಕಾರ್ಖಾನೆ ನಡೆಸಲು ತೀರ್ಮಾನಿಸಿದ್ದಾರೆ.
ಅಲ್ಲದೇ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಕಾರ್ಖಾನೆ ನಡೆಸಲು ಆಡಳಿತ ಮಂಡಳಿ ಸದಸ್ಯರು ತೀರ್ಮಾನಿಸಿದ್ದಾರೆ. ಆಡಳಿತ ಮಂಡಳಿ ಸದಸ್ಯರೆಲ್ಲರೂ ನಿಖೀಲ ಕತ್ತಿ ಮಾತ್ರ ಮುಂದಿನ ಚುನಾವಣೆಗೆ ಸ್ಪರ್ದಿಸಿದರೇ ಸಂಪೂರ್ಣವಾಗಿ ಬೆಂಬಲ ಕೊಡಲು ತೀರ್ಮಾನಿಸಿದ್ದಾರೆ.
ಇನ್ನೂ ಹೀರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಮುಂದಿನ ಅಧ್ಯಕ್ಷರಾಗಿ ಮುಖಂಡ ಹುಕ್ಕೇರಿ ಪಟ್ಟಣದ ಅಶೋಕ ಪಟ್ಟಣಶೆಟ್ಟಿ ಆಯ್ಕೆಯಾಗುವದು ಬಹುತೇಕ ಖಚಿತವಾಗಿದ್ದರೆ ಉಪಾಧ್ಯಕ್ಷರಾಗಿ ನೊಗನಿಹಾಳ ಗ್ರಾಮದ ಅಜ್ಜಪ್ಪ ಕಲ್ಲಟ್ಟಿ ಆಯ್ಕೆಯಾಗಲಿದೆ ಎನ್ನಲಾಗುತ್ತಿದೆ.