ಉ.ಕ ಸುದ್ದಿಜಾಲ ಅಥಣಿ :
ವೈದ್ಯನ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ ಒಂಬತ್ತು ತಿಂಗಳ ತುಂಬು ಗರ್ಭಿಣಿ. ಅಥಣಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಗರ್ಭಿಣಿ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಘಟನೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಘಳಖೋಡ ನಿವಾಸಿ ಮುತ್ತವ್ವ ಸಂತೋಷ ಗೊಳಸಂಗಿ (21) ಮೃತಪಟ್ಟ ಗರ್ಭಿಣಿ. ಇದೇ ತಿಂಗಳಬ 31 ರಂದು ಹೆರಿಗೆ ದಿನಾಂಕ ನೀಡಿದ್ದ ವೈದ್ಯರು. ಮೊನ್ನೆಯ ದಿನ ಚೆಕ್ ಅಪ್‌ಗೆಂದು ಅಥಣಿ ತಾಲೂಕಾಸ್ಪತ್ರೆಗೆ ಬಂದಿದ್ದ ಮಹಿಳೆ.
ಗರ್ಭಿಣಿಯ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ನಿನ್ನೆ ತಾಲೂಕಾಸ್ಪತ್ರೆಗೆ ದಾಖಲಿಸಿಕೊಂಡ ವೈದ್ಯರು ಬಳಿಕ ಗರ್ಭಿಣಿಯ ಬಿಪಿಯಲ್ಲಿ ನಿರಂತರ ವ್ಯತ್ಯಾಸ ಕಾಣುತ್ತಿದ್ದ ಹಿನ್ನೆಲೆ. ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಲು ಮುಂದಾದ ವೈದ್ಯರು. ಹೆರಿಗೆ ಸಂದರ್ಭದಲ್ಲಿ ನಿಲ್ಲದ ರಕ್ತಸ್ರಾವ.
ಕೂಡಲೇ ತಾಲೂಕಾಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಿಂದ ಖಾಸಗಿ ವಾಹನದಲ್ಲಿ ಖಾಸಗಿ ಆಸ್ಪತ್ರೆಗೆ ರವಾನೆ. ನಿರಂತರ ರಕ್ತಸ್ರಾವ ಹಿನ್ನೆಲೆ ಮಾರ್ಗ ಮಧ್ಯೆ ಕೊನೆಯುಸಿರೆಳೆದ ಬಾಣಂತಿ. ಹೆಣ್ಣು ಮಗುವಿಗೆ ಜನ್ಮ ನೀಡಿ ಕೊನೆಯುಸಿರೆಳೆದ ಬಾಣಂತಿ.
ಮುಗಿಲು ಮುಟ್ಟಿದ ಬಾಣಂತಿಯ ಸಂಬಂಧಿಕರ ಆಕ್ರಂದನ.ವಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.