ಉ.ಕ ಸುದ್ದಿಜಾಲ ಅಥಣಿ :

ಕರ್ನಾಟಕದಲ್ಲಿನ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಯೋಗ್ಯಬೆಲೆ ನೀಡದೆ ಇರುವುದರಿಂದ ರಾಜ್ಯದ ಗಡಿ ಭಾಗದ ಕಬ್ಬನ್ನು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗೆ ಕಳುಹಿಸುತ್ತಾರೆ. ಕರ್ನಾಟಕ ಬೆಲೆಗೂ ಅಧಿಕ ಬೆಲೆ ನೀಡುತ್ತಿರುವ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು. ಹೀಗಾಗಿ ಕರ್ನಾಟಕದ ಸರ್ಕಾರಕ್ಕೆ ಬರಬೇಕಾದ ಟ್ಯಾಕ್ಸ್ ಮಹಾರಾಷ್ಟ್ರದ ಪಾಲಾಗುತ್ತಿದೆ.

ಮಂಡ್ಯ ಜಿಲ್ಲೆಯನ್ನ ಹೊರತು ಪಡಿಸಿದರೆ ಅತಿ ಹೆಚ್ಚಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಿ ಕಬ್ಬನ್ನು ಬೆಳೆಯುತ್ತಾರೆ. ಆದರೆ, ಮಹಾರಾಷ್ಟ್ರ ರಾಜ್ಯದಲ್ಲಿ ಒಂದು ಟನ್ ಕಬ್ಬಿಗೆ ಮೂರು ಸಾವಿರಕ್ಕೂ ಅಧಿಕ ಬಿಲ್ ನೀಡುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ಮಾತ್ರ 2,900 ಒಳಗೆ ಕಬ್ಬಿನ ಬಿಲ್ ಘೋಷಣೆ ಮಾಡಿಲಾಗಿದೆ.

ಚಿಕ್ಕೋಡಿ ಉಪವಿಭಾಗದ ಅಥಣಿ, ಕಾಗವಾಡ, ರಾಯಬಾಗ, ಚಿಕ್ಕೋಡಿ, ನಿಪ್ಪಾಣಿ ಹಾಗೂ ಹುಕ್ಕೇರಿ ತಾಲೂಕಿನ ವಿವಿಧ ಗ್ರಾಮದ ರೈತರು ಪಕ್ಕದ ಮಹಾರಾಷ್ಟ್ರದ ಸಾಂಗಲಿ, ಇಚಲಕರಂಜಿ ಕೊಲ್ಲಾಪೂರ ಜಿಲ್ಲೆಗಳಿಗೆ ಕಬ್ಬನು ಸಾಗಿಸುತ್ತಿರುವ ಪರಿಣಾಮ ಕರ್ನಾಟಕ ಸರ್ಕಾರಕ್ಕೆ ಬರಬೇಕಾದ ಆದಾಯ ಮಹಾರಾಷ್ಟ್ರದ ಪಾಲಾಗುತ್ತಿದೆ.

ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ತಾಲೂಕಿನ ರೈತರು ಮಹಾರಾಷ್ಟ್ರದ ಹುಪರಿ, ಟಾಕಳಿ, ಶಿರೋಳ, ಇಚಲಕರಂಜಿ, ಕಾಗಲ, ಹಮಿದವಾಡಾ ಸಕ್ಕರೆ ಕಾರ್ಖಾನೆಗಳಿಗೆ ಕಳುಹಿಸುತ್ತಾರೆ. ಅಥಣಿ, ಕಾಗವಾಡ, ರಾಯಬಾಗ ವ್ಯಾಪ್ತಿಯ ರೈತರು ಸಾಂಗಲಿ, ಕೊಲ್ಲಾಪೂರ ಜಿಲ್ಲೆಗೆ ಕಳಿಸುತ್ತಾರೆ‌.

ಹೀಗೆ ಕಳಿಸಲು ಕಬ್ಬಿನ ಬೆಲೆಯಲ್ಲಿ ತಾರತಮ್ಯ. ಮಹಾರಾಷ್ಟ್ರಕ್ಕಿಂತ ಕರ್ನಾಟಕದಲ್ಲಿ ಕಬ್ಬಿನ ಬೆಲೆ ಕಡಿಮೆ ಯಾಕೆಂದರೆ ನಮ್ಮ ಸಕ್ಕರೆ ಕಾರ್ಖಾನೆಯ ಮಾಲೀಕರು ಜನಪ್ರತಿನಿಧಿಗಳು ಅತಿ ಹೆಚ್ಚಾಗಿ ಸಕ್ಕರೆ ಕಾರ್ಖಾನೆಗಳಿವೆ. ಹೀಗಾಗಿ ಕರ್ನಾಟಕ ಸಿಎಂ ಬೊಮ್ಮಾಯಿ ಸಭೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಆದರೆ, ಸಕ್ಕರೆ ಕಾರ್ಖಾನೆ ಮಾಲೀಕರ ಲಾಭಕ್ಕಾಗಿ ಸರ್ಕಾರಕ್ಕೆ ಬರುವ ಆದಾಯ ಮಹಾರಾಷ್ಟ್ರದ ಪಾಲಾಗುತ್ತಿದೆ ಇದರ ಕಡೆ ಗಮನ ಹರಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಚಂದ್ರಕಾಂತ ಹುಕ್ಕೇರಿ ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಕರ್ನಾಟಕ ಸಕ್ಕರೆ ಕಾರ್ಖಾನೆ ಮಾಲೀಕರ ಲಾಭಕ್ಕಾಗಿ ರೈತರಿಗೆ ನೀಡಬೇಕಾದ ಕಬ್ಬಿನ ಬಿಲ್ ಕಡಿನೆ ನೀಡುತ್ತಿರುವ ಪರಿಣಾಮ ರೈತರು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳ ಕಡೆ ಮುಖ ಮಾಡಿವೆ.

ಇದರಿಂದ ಸರ್ಕಾರಕ್ಕೆ ಬರಬೇಕಾದ ಟ್ಯಾಕ್ಸ್ ಮಹಾರಾಷ್ಟ್ರ ಸರ್ಕಾರ ದ ಪಾಲುಗುತ್ತಿದ್ದು ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತಿದ್ದು ಸಿಎಂ ಬೊನ್ಮಾಯಿ ಅವರು ಇತ್ತ ಗಮನಹರಿಸಿ ಕರ್ನಾಟಕ ರಾಜ್ಯದಲ್ಲಿರುಬ ಕಬ್ಬಿನ ಬೆಲೆಗೆ ಸೂಕ್ತ ಬೆಲೆ ನಿಗಧಿ ಮಾಡಬೇಕೆಂದು ಸರ್ಕಾರಕ್ಕೆ ರೈತರು ಆಗ್ರಹಿಸಿದ್ದಾರೆ.