ಉ.ಕ ಸುದ್ದಿಜಾಲ ಅಥಣಿ :

ಕಬ್ಬು ಕಟಾವು ಸಂದರ್ಭದಲ್ಲಿ ಹಾವು ಕಚ್ಚಿ ಕಾರ್ಮಿಕ ಸಾವಿಗಿಡಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ನಡೆದಿದೆ.

ಕಳೆದ ನಾಲ್ಕು ವರ್ಷದಿಂದ ಕಟಗೇರಿ ಗ್ರಾಮದಲ್ಲಿ ವಾಸವಾಗಿದ್ದು ಎಂದಿನಂತೆ ಕಬ್ಬು ಕಟಾವು ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಮೃತ ದುರ್ದೈವಿ ನಿತೇಶ್ ಬಾಬು ಪೂಜಾರಿ (30) ಅಥಣಿ ತಾಲ್ಲೂಕಿನ ಹಣಮಾಪುರ ಗ್ರಾಮಸ್ಥರು ಎಂದು ಗುರುತಿಸಲಾಗಿದೆ.

ಹಾವು ಕಡೆತ ತೀವ್ರತೆಗೆ ಹಾವಿನ ಒಂದು ಹಲ್ಲು ಮೃತ ನಿತೇಶ್ ಬಲಗೈಯಲ್ಲಿ ಮುರಿದ ಪರಿಣಾಮ ಹಾವು ಕಚ್ಚಿ ಇಪ್ಪತ್ತು ನಿಮಿಷದಲ್ಲಿ ನೀತೇಶ ಪ್ರಾಣ ಪಕ್ಷಿ ಹಾರಿಹೊಗಿದೆ.

ಕಟಗೇರಿ ಗ್ರಾಮದಿಂದ ಅಥಣಿ ಪಟ್ಟಣದ ಆಸ್ಪತ್ರೆ ಸೇರಿಸುವ ದಾರಿ ಮಧ್ಯದಲ್ಲಿ ಕೊನೆಯುಸಿರು ಎಳೆದಿದ್ದಾರೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.