ಉ‌.ಕ ಸುದ್ದಿಜಾಲ ಬೆಳಗಾವಿ :

ಕನ್ನಡ ಧ್ವಜ ಹಿಡಿದು ನೃತ್ಯ ಮಾಡಲು ಯತ್ನಿಸಿದ ಕನ್ನಡ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ನಗರದ ಟಿಳಕವಾಡಿಯಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಇಂದು ಸಂಜೆ ನಡೆದಿದೆ.

ಬೆಳಗಾವಿ ನಗರದಲ್ಲಿ  ಮತ್ತೆ ಬಾಲಬಿಚ್ಚಿದ ನಾಡದ್ರೋಹಿಗಳು, ಕನ್ನಡ ಧ್ವಜ ಹಿಡಿದು ನೃತ್ಯ ಮಾಡಲು ಯತ್ನಿಸಿದ ಕನ್ನಡ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದಾರೆ. ಮರಾಠಿ ಭಾಷಿಕ ವಿದ್ಯಾರ್ಥಿ ಗಳಿಂದ ಕನ್ನಡ ವಿದ್ಯಾರ್ಥಿ ಮೇಲೆ ಮನಸ್ಸೋ ಇಚ್ಚೆ ಹಲ್ಲೆ ಮಾಡಿದ್ದಾರೆ.

ಟಿಳಕವಾಡಿಯಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಾಡೋದಕ್ಕೆ ನಾಡ ಧ್ವಜ ಹಿಡಿದು ಡ್ಯಾನ್ಸ್ ಮಾಡುವಾಗ ಹಾಡಿಗೆ ಕನ್ನಡ ಧ್ವಜ ಹಿಡಿದು ನೃತ್ಯ ಮಾಡಲು ಯತ್ನಿಸಿದ ಕನ್ನಡ ವಿದ್ಯಾರ್ಥಿಗೆ ಥಳಿಸಿದ್ದಾರೆ.

ಮರಾಠಿ- ಕನ್ನಡ ಭಾಷಿಕ ವಿದ್ಯಾರ್ಥಿಗಳ ನಡುವೆ ವಾಗ್ವಾದ, ಗಲಾಟೆ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಶಾಲೆಯ ಮುಖ್ಯಸ್ಥರು, ಉಪನ್ಯಾಸಕರಿಂದ ಮದ್ಯಪ್ರವೇಶ ಮಾಡಿದ್ದಾರೆ. ಟಿಳಕವಾಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.