ಉ.ಕ ಸುದ್ದಿಜಾಲ ಶೇಡಬಾಳ :

ಚರ್ಮಗಂಟು ರೋಗದಿಂದ ಹಲವಾರು ಹಸು, ಹಾಗೂ ಎತ್ತುಗಳು ಸಾವನಪ್ಪಿವೆ. ಹೀಗಾಗಿ ಪ್ರಾಣಿ ಪ್ರಿಯರಿಗೆ ನುಂಗಲಾರದ ತುತ್ತಾಗಿದ್ದು, ಈಗಾಗಲೇ ಸರ್ಕಾರ ಕೂಡಾ ಹಲವಾರು ಔಷಧಿಗಳನ್ನ ನೀಡಿದರು ಪ್ರಯೋಜನವಾಗಿಲ್ಲ.

ಇದರಿಂದ ಬೇಸತ್ತ ರೈತರಿಗೆ ಕರ್ನಾಟಕ – ಮಹಾರಾಷ್ಟ್ರದ ಗಡಿ ಭಾಗದಲ್ಲೊಬ್ಬ ಉಚಿತವಾಗಿ ಚರ್ಮಗಂಟು ರೋಗಕ್ಕೆ ಔಷಧ ನೀಡುವುದರ ಮೂಲಕ ಪ್ರಾಣಿ ಪ್ರಿಯರಿಗೆ ಇತ ಹಿರೋ ಆಗಿದ್ದಾನೆ. ಯಾರು ಆತ, ಆತ ಕೊಡೊ ಔಷಧಿ ಹೇಗಿದೆ ಎನ್ನುವುದು ತಿಳಿಯ ಬೇಕಾದರೆ ಈ ಸ್ಟೋರಿ ನೋಡಿ

ಹೀಗೆ ರೈತರೆಲ್ಲರೂ ಒಗ್ಗಟ್ಟಾಗಿ ಎಲೆ ಕೀಳುತ್ತಿರುವುದು, ಗ್ರ್ಯಾಂಡಿಯಲ್ಲಿ ಹಾಕಿ ತೆಗೆದು ಉಂಡೆ ರೀತಿ ತಯಾರು ಮಾಡುತ್ತಿರುವ ದೃಶ್ಯ ಕಂಡು ಬಂದದ್ದು ಬೆಳಗಾವಿ ಜಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದಲ್ಲಿ ಈ ರೀತಿ ಆಯುರ್ವೇದ ಔಷಧಿಯನ್ನ ಉಚಿತವಾಗಿ ರೆಡಿ ಮಾಡಿ ಕೊಡುತ್ತಿರುವವರ ಹೆಸರು ಸೀತಲ ಪಾಟೀಲ ಅಂತಾ ಇವರು ಬಟ್ಟೆ ಅಂಗಡಿಯನ್ನ ಹೊಂದಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಈ ಚರ್ಮಗಂಟು ರೋಗದಿಂದ ಹಸುಗಳಿಗೆ ಆಗುತ್ತಿರುವ ಸಾವು ನೋವುಗಳ ಬಗ್ಗೆ ಅರಿತು ಪಕ್ಕದ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯಲ್ಲಿರು ರಾಜು ದಿಕ್ಷೀತ  ಅವರ ಬಳಿ ಆಯುರ್ವೇದಿಕ ಔಷಧ ತಯಾರಿಸುವುದನ್ನ ಕಲಿತು ಗಡಿ ಭಾಗದ ಗ್ರಾಮದ ಜನರಿಗೆ ಉಚಿತವಾಗಿ ಆಯುರ್ವೇದ ಔಷಧ ನೀಡುತ್ತಿರುವುದು ಹೆಮ್ಮೆಯ ವಿಷಯ.

ಶೇಡಬಾಳ ಪಟ್ಟಣದ ದೇಶಿ ಗೋವು ಅಮೃತ ಸಂಘದ ವತಿಯಿಂದ ಸುಮಾರು ಒಂದು ತಿಂಗಳ ಅಧಿಕದಿಂದ ಶೇಡಬಾಳ ಪಟ್ಟಣದ ಆನಂತ ಎಂಟ‌ಪ್ರೈಸಿಸ್‌ನ ಆಶ್ರಯದಲ್ಲಿ ದೇಶಿ ಗೋವು ಅಮೃತ ಸಂಘವು ನೀಡುತ್ತಿದೆ.

ದಿನಂಪ್ರತಿ ನೂರಾರು ರೈತರು ಬಂದು ಔಷಧ ಪಡೆದುಕೊಳ್ಳುತ್ತಿದ್ದು ಈ ಔಷಧ ಹೇಗೆ ಬಳಕೆ ಮಾಡಬೇಕೆನ್ನುವುದನ್ನ ಸೀತಲ ಪಾಟೀಲ ಅವರು ನ್ಯೂಸ್ ಫಸ್ಟ‌ಗೆ ತಿಳಿಸಿದ್ದರೆ‌.

ಈಗಾಗಲೇ ಸರ್ಕಾರ ಕೂಡಾ ಚರ್ಮಗಂಟು ರೋಗಕ್ಕೆ ಔಷಧಿ ನೀಡಿದರು ಸಹ ಏನೂ ಪ್ರಯೋಜನವಾಗಿಲ್ಲ ಹಲವಾರು ರೈತರ ಹಸುಗಳು ಕೂಡಾ ಸಾವನಪ್ಪಿದ್ದು ರೈತರು ಕಂಗಾಲಾಗಿದ್ದಾರೆ. ಸದ್ಯ ಸರ್ಕಾರಿ ವೈದ್ಯರು ಕೂಡಾ ಆಯುರ್ವೇದ ಔಷಧಿ ಪಡೆಯಿರಿ ಎಂದು ಸಲಹೆ ನೀಡುತ್ತಿದ್ದು ದಿನಂಪ್ರತಿ ಶೇಡಬಾಳ ಪಟ್ಟಣದ ಸುತ್ತಮುತ್ತಲಿನ ಗ್ರಾಮದವರು.

ವಿವಿಧ ಜಿಲ್ಲೆಯ ರೈತರ ಜೊತೆಗೆ ಪಕ್ಕದ ಮಹಾರಾಷ್ಟ್ರ ರಾಜ್ಯದ ರೈತರು ಕೂಡಾ ಔಷಧ ಪಡೆಯಲು ಆಗಮಿಸುತ್ತಿದ್ದಾರೆ. ಈ ಔಷದದಿಂದ ನಮ್ಮ ಹಸುಗಳು ಮೊದಲಿನ ತರಹ ಮೇವನ್ನು ತಿನ್ನುತ್ತಿವೆ. ಸೀತಲ ಅವರ ಕಾರ್ಯಕ್ಕೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಸೀತಲ ಪಾಟೀಲ ಅವರ ಕಾರ್ಯಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು ಕಳೆದ ಒಂದು ತಿಂಗಳಿನಿಂದ ಉಚಿತ ಆಯುರ್ವೇದಿಕ್ ಔಷಧ ನೀಡುತ್ತಿದ್ದು ಇವರ ಕಾರ್ಯಕ್ಕೆ ಶ್ರೀಮಂತ ಪಾಟೀಲ ಪೌಂಡೇಶನ ವತಿಯಿಂದ 50,000 ಹಣ ಸಹಾಯ ಮಾಡಿದ್ದಾರೆ.

ಆದರೆ, ಇವರಿಗೆ ಇನ್ನೂ ಕೂಡಾ ಧನ ಸಹಾಯ ಹಾಗೂ ಹಸುಗಳಿಗೆ ಆಯುರ್ವೇದ ಔಷಧ ಬೇಕಾದರೆ ಸೀತಲ ಪಾಟೀಲ 9535870509 ಇವರ ನಂಬರಗೆ ಸಂಪರ್ಕಿಸಲು ಕೊರಿದ್ದಾರೆ.