ಉ.ಕ ಸುದ್ದಿಜಾಲ ಅಥಣಿ :

ಅರಿಶಿನವನ್ನು ಆಹಾರ ಪದಾರ್ಥಗಳಿಗೆ ಬಣ್ಣ ಮತ್ತು ಪರಿಮಳ ಬರಿಸಲು, ಸಾಂಬಾರ ಪುಡಿ ತಯಾರಿಸಲು, ಬಟ್ಟೆ ಕಾರ್ಖಾನೆಗಳಲ್ಲಿ ಬಣ್ಣ ಹಾಕಲು, ಆಯುರ್ವೇದ ಔಷಧಿ ಹಾಗೂ ಸುಗಂಧ ತಯಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತದೆ. ಅಲ್ಲದೆ ಅರಿಶಿನ ಅಡುಗೆ ಮನೆಯ ಸಂಗಾತಿ.

ದಕ್ಷಿಣ ಭಾರತದ ಅಡುಗೆಗಳಲ್ಲಂತೂ ಅರಿಶಿನವನ್ನು ಹೆಚ್ಚಾಗಿ ಬಳಸುತ್ತಾರೆ. ಅರಿಶಿಣದ ಬಗ್ಗೆ ಯಾಕಿಷ್ಟು ವರ್ಣನೆ ಅಂತೀರಾ ಇಲ್ಲಿದೆ ನೋಡಿ ಅರಶೀನ ಬೇರಿನ ಮಾಹಿತಿ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ರೈತನ ಅರುಶಿನ  41101 ರೂ ದಾಖಲೆ ಬೆಲೆಗೆ ಮಾರಾಟವಾಗಿ ದೇಶದ ಗಮನ ಸೆಳೆದಿದೆ. ಹೌದು, ಅಚ್ಚರಿ ಆದ್ರೂ ಇದು ಸತ್ಯ,

ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ  ರೈತ ಸೈಬಣ್ಣ ಭೂಪತಿ ಪೂಜಾರಿ  ಅವರ ಅರುಶಿನ ಭಾರತದಲ್ಲಿ ಅಚ್ಚರಿಯ ದರಕ್ಕೆ ಮಾರಾಟವಾಗಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ ಪ್ರತಿ ಕ್ವಿಂಟಲ್ ಗೆ ಬರೋಬ್ಬರಿ 41,101 ರೂ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.

ಮೂರು ಎಕರೆ ಅರಿಶಿಣ ಬೆಳೆದ ರೈತ ಸೈಬಣ್ಣ ಪ್ರತಿ ಎಕರೆಗೆ 25-28 ಕ್ವಿಂಟಲ್ ಅರುಷಿನ  ಇಳುವರಿ ಬಂದಿದ್ದು ರೈತನ ಶ್ರಮಕ್ಕೆ ವರದಾನವಾಗಿದೆ  ಹಲವು ನಿರುದ್ಯೋಗಿ ಯುವಕರಿಗೆ ಈ ರೈತ ಮಾದರಿಯಾಗಿದ್ದ ರೈತ ಸೈಬಣ್ಣನ  ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.

ರೈತ ಸೈಬಣ್ಣ ತನ್ನ ಮೂರು ಎಕರೆ ಭೂಮಿಯಲ್ಲಿ ಶೈಲಂ ತಳಿಯ ಅರುಶಿನ ಬಿಜ ನಾಟಿ ಮಾಡಿ ಸಮರ್ಪಕ ನೀರು ಔಷಧೋಪಚಾರದೊಂದಿಗೆ ಉತ್ತಮ ಇಳುವರಿಗೆ ಕಂಡಿದ್ದಾರೆ. ಪ್ರತಿ ಎಕ್ಕರೆಗೆ 30 ಸಾವಿರ ಖರ್ಚು ಮಾಡಿದ ಇವರು ಮೂರು ಎಕ್ಕರೆ ಅರುಶಿನದಿಂದ ಅಂದಾಜು 30 ಲಕ್ಷ ಆದಾಯದ ನಿರೀಕ್ಷೆ ಇಟ್ಟಿದ್ದಾರೆ.

ಈಗಾಗಲೆ 18 ಕ್ವಿಂಟಲ್ ಅರುಶಿನ ಮಾರಾಟವಾಗಿದ್ದು 739818 ನಿವ್ವಳ ಲಾಭ ಪಡೆದಿದ್ದಾರೆ ಒಟ್ಟಾರೆ ಬರದ ಮದ್ಯ ಕೈಕಟ್ಟಿ ಕುಳಿತ ರೈತರ ಮದ್ಯ ಕಷ್ಟ ಪಟ್ಟು ಇಷ್ಟದ ಬೆಳೆದು ಕೃಷಿಯಿಂದ ಖುಷಿ ಕಂಡ ರೈತನ ಯೋಶೋಗಾತೆಗೆ ಎಲ್ಲರ ಮೆಚ್ಚುಗೆ ನೀಡಿದ್ದಾರೆ.