ಬೆಳಗಾವಿ :
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲ್ಲಬೇಕು. ಜಿಲ್ಲೆಯ ಮೂಲೆ ಮೂಲೆಯಲ್ಲಿ ಪ್ರಚಾರ ಮಾಡುತ್ತಿದ್ದೇವೆ. ನಿಮಗೆ ಬೇಕಿರೋ ಉತ್ತರ ಇಂದು ಸಿಗಲ್ಲ. ಪರಿಷತ್ ಫಲಿತಾಂಶ ದಿನ ಡಿ.14 ರಂದು ಡಿಕೆಶಿ ಪ್ರತಿ ಶಬ್ದಕ್ಕೆ ಉತ್ತರ ಸಿಗಲಿದೆ. ಅತ್ಯಂತ ಕಠೊರವಾಗಿ ಉತ್ತರ ಕೊಡ್ತಿನಿ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳೆ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ನಾವು ಈಗ ಚುನಾವಣೆ ಮೂಡನಲ್ಲಿ ಇದ್ದೇವೆ. ಹತಾಶೆ ಮನೋಭಾವದಿಂದ ಡಿಕೆಶಿ ಟೀಕೆ ಮಾಡಿದ್ದಾರೆ. 1985 ರಿಂದ ಇಲ್ಲಿಯ ವರೆಗೆ ನಡೆದ ಎಲ್ಲಾ ವಿಚಾರ ಬಹಿರಂಗ ಮಾಡ್ತಿನಿ. ನನ್ನ ವ್ಯಕ್ಯಿತ್ವ ಏನು, ಡಿಕೆಶಿ ವ್ಯಕ್ತಿತ್ವ ಏನು ಎಂದು ಹೇಳ್ತಿನಿ. ಫಲಿತಾಂಶದ ದಿನ ಎಲ್ಲಕ್ಕೂ ಉತ್ತರ ಸಿಗುತ್ತೆ ಡಿಕೆಶಿ ಕುಟುಂಬ, ಜಾರಕಿಹೊಳಿ ಕುಟುಂಬ ಎನಿತ್ತು ಎಲ್ಲಾ ಬಹಿರಂಗ. ದೆಹಲಿ ವರಿಷ್ಠರ ಆಶೀರ್ವಾದ ನನ್ನ ಮೇಲೆ ದೆಹಲಿ ವರಿಷ್ಠರು ಇದ್ದಾರೆ ಎಂದು ನಾನು ಜೀವಂತ ಇದ್ದೇನೆ. ಇಲ್ಲವೇ ಇಷ್ಟೊತ್ತಿಗೆ ನನ್ನನು ಮುಗಿಸಿ ಬಿಡ್ತಿದ್ರು, ಇಷ್ಟೊತ್ತಿಗೆ ನನ್ನ ವಿರುದ್ಧ ಷಡ್ಯಂತ್ರ ಮಾಡಿ ಮುಗಿಸಿ ಬಿಡುತ್ತಿದ್ರು ಎಂದು ಹೇಳಿದರು.