ಉ.ಕ ಸುದ್ದಿಜಾಲ ಮುಂಬೈ :
ಬಿಸಲಿನ ತಾಪ ದಿನದಿಂದ ದಿನ್ಕೆ ಏರಿಕೆಯಾಗುವುದರ ಜೊತೆಗೆ ಕೃಷ್ಣಾ, ವೇದಗಂಗಾ, ದೂದಗಂಗಾ ಹೀರಣ್ಯಕೇಶಿ ನದಿಗಳು ಬತ್ತುತ್ತಿವೆ. ದಿನದಿಂದ ದಿನಕ್ಕೆ ನೀರಿಗಾಗಿ ಹಾಹಾಕಾರ ಉಂಟಾಗಿದ್ದು ಜನ ಜೀವನ ಅಸ್ವಸ್ಥಗೊಂಡಿದೆ. ಹೀಗಾಗಿ ಕೃಷ್ಣಾ ಹಾಗೂ ಹಿರಣ್ಯಕೇಶಿ ನದಿಗಳಿಗೆ ಶೀಘ್ರ ನೀರು ಬಿಡಲು ಮನವಿ ಮಾಡಿದ ಬಿಜೆಪಿ ನಾಯಕರು
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸನ್ಮಾನ್ಯ ದೇವೆಂದ್ರ ಪಡ್ನವೀಸ್‌ಗೆ ಮನವಿ ಮಾಡಿದ ಬಿಜೆಪಿ ಮುಖಂಡರರ. ಮಹಾರಾಷ್ಟ್ರದ ಮುಂಬೈ ಬಿಜೆಪಿ ಕಚೇರಿಯಲ್ಲಿ ಬೇಟಿ ಮಾಡಿದ ಚಿಕ್ಕೋಡಿ ಉಪವಿಭಾಗದ ಬಿಜೆಪಿ ನಾಯಕರು ಮಹಾರಾಷ್ಟ್ರದಿಂದ ಕೃಷ್ಣಾ, ವೇದಗಂಗಾ ನದಿ ಹಾಗೂ ಹಿಡಕಲ್ ಜಲಾಶಯಕ್ಕೆ ನೀರನ್ನು ಬಿಡುವಂತೆ ಮನವಿ ಮಾಡಿದ್ದಾರೆ.
ಜಾನುವಾರುಗಳಿಗೆ ಹಾಗೂ ಜನರ ನಿತ್ಯ ಉಪಯೋಗಕ್ಕಾಗಿ ನೀರಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ ಶೀಘ್ರ ಕೃಷ್ಣಾ ಹಾಗೂ ಹಿರಣ್ಯಕೇಶಿ ನದಿಗಳಿಗೆ ನೀರು ಬಿಡುವಂತೆ ಮನವಿ ನೀಡಿದ ಬಿಜೆಪಿ ನಾಯಕರು ಸಂಸದ ಅಣ್ಣಾಸಾಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ, ಶಾಸಕ ದುರ್ಯೊಧನ ಐಹೊಳೆ, ನಿಖೀಲ ಕತ್ತಿ ಹಾಗೂ ಮಾಜಿ ಸಚಿವ ಶ್ರೀಮಂತ ಪಾಟೀಲ ಮನವಿ ಮಾಡಿದ್ದಾರೆ.