ರಾಯಬಾಗ :

ನೆರೆ ಬಂದು ನಾಲ್ಕು ತಿಂಗಳು ಕಳೆದರು ಬರದ ಪರಿಹಾರ ಹಿನ್ನಲೆಯಲ್ಲಿ ಪ್ರತಿಭಟನೆಗೆ ಮುಂದಾದ ನೆರೆ ಸಂತ್ರಸ್ಥರು. ಕಳೆದ ಎರಡು ಬಾರಿ ಕೃಷ್ಣಾ ನದಿ ಪ್ರವಾಹದಿಂದ ಮನೆಗಳು ಶಿಥಿಲಗೊಂಡ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಲು ಪರಿಹಾರ ಇಲ್ಲ ಹೀಗಾಗಿ ಗ್ರಾಮ ಪಂಚಾಯತಿ ಬೀಗ ಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಶಿರಗೂರ ಗ್ರಾಮದಲ್ಲಿ ನಡೆದಿದೆ.

ಶಿರಗೂರ ಗ್ರಾಮದಲ್ಲಿ ನೂರಾರು ಸಂತ್ರಸ್ಥರು ಕೂಡಿಕೊಂಡು ಪ್ರತಿಭಟನೆ ನಡೆಸಿ ಗ್ರಾಮ ಪಂಚಾಯತಿ ಮುತ್ತಿಗೆ ಹಾಕಿ ಪಂಚಾಯತಿಗೆ ಬೀಗ ಹಾಕಿ ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವವರೆಗೆ ಬೀಗ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದ ನೆರೆ ಸಂತ್ರಸ್ಥರು. ಕಳೆದ 2019 ಹಾಗೂ 2021ರಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಗ್ರಾಮದ ಎಸ್ಸಿ ಕಾಲೊನಿ ಹಾಗೂ ಇತರೆ ಸೇರಿ ಸುಮಾರು 150 ಮನೆಗಳು ಶಿಥಿಲಾವಸ್ಥೆ. ಪರಿಹಾರ ಒದಗಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅನ್ಯಾಯ ಮಾಡಲಾಗಿದೆ‌.

ಸಂತ್ರಸ್ತರು ವಸತಿಗೆ ಮನೆ ಇಲ್ಲದೆ ಬೀದಿ ಹಾಗೂ ಸಮುದಾಯ ಭವನಗಳಲ್ಲಿ ವಾಸ ಮಾಡುತ್ತಿದ್ದಾರೆ. ಹಲವು ಬಾರಿ ತಹಶೀಲ್ದಾರ, ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಕ್ರಮ ಇಲ್ಲ. ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬೇಸತ್ತ ಶಿರಗೂರ ನೆರೆ ಸಂತ್ರಸ್ಥರು.