ಕಾಗವಾಡ :
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬಿಕೆ ಯಿಂದ ಉಗಾರ ಕೆಎಚ್ ಕಡೆ ತೆರಳುವಾಗ ಎಲ್ಲವೂ ರಸ್ತೆ ಹಾಳಾಗಿದೆ. ಈ ರಸ್ತೆ ರಾಜ್ಯ ಹೆದ್ದಾರಿಯಾಗಿದ್ದು ಈ ರಸ್ತೆ ಮೂಲಕವೇ ಪಕ್ಕದ ಮಹಾರಾಷ್ಟ್ರಕ್ಕೆ ತೆರಳಬೇಕು ದಿನಂಪ್ರತಿ ಸಾವಿರಾರು ವಾಹನಗಳು ಈ ರಸ್ತೆ ಮೂಲಕವೇ ತೆರಳ ಬೇಕು ಈಗಾಗಲೇ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಿದ್ದು, ಕಬ್ಬು ತುಂಬಿದ ಟ್ರ್ಯಾಕ್ಟರ ಟ್ರೇಲಿಗಳು ಕಬ್ಬು ತುಂಬಿಕೊಂಡು ಬರುವಾಗ ಸ್ವಲ್ಪ ಮಿಸಾಗಿ ಟ್ರ್ಯಾಕ್ಟರ ಗಾಲಿಗಳು ಹೊಳಾಡಿದರೆ ಕಬ್ಬು ತುಂಬಿದ ಟ್ರ್ಯಾಕ್ಟರ ಬೀಳುವಂತ ಹಲವಾರು ಸನ್ನಿವೇಶಗಳು ನಡೆದಿವೆ.
ಕಳೆದ ಐದು ವರ್ಷಗಳಿಂದ ಈ ಭಾಗದ ಜನರು ತೊಂದರೆ ಅನುಭವಿಸುತ್ತಿದ್ದರು ಸಹಿತ ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇತ್ತ ಗಮನ ಹರಿಸುತ್ತಿಲ್ಲ. ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರು ಸೇತುವೆ ನಿರ್ಮಾಣ ಮಾಡಿದ್ದಾರೆ, ಆದರೆ, ಪಕ್ಕದ ರಸ್ತೆ ಮಾತ್ರ ನಿರ್ಮಾಣ ವಾಗದ ಹಿನ್ನಲೆ ಸ್ಥಳೀಯರು ದಿನಂಪ್ರತಿ ತೊಂದರೆ ಅನಿಭವಿಸುತ್ತಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯಾದ ಪರಿಣಾಮ ರಸ್ತೆಗಳು ಕೊಳಚೆಯಂತಾಗಿದ್ದು, ಏನಾದರೂ ಅಹಿತಕರ ಘಟನೆ ಸಂಭವಿಸುವ ಮೊದಲೇ ರಸ್ತೆ ನಿರ್ಮಾಣ ಮಾಡಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕೃಷ್ಣಾ ನದಿ ಪ್ರವಾಹಕ್ಕೆ ಉಗಾರ ಗ್ರಾಮದ ಬ್ರಿಜ್ ಮುಳಗುವುದರಿಂದ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರು ಬ್ರೀಜ್ ಅನ್ನು ಮೇಲ್ದರ್ಜೆಗೆ ಎರಿಸಿದ್ದರು ಬ್ರಿಜ್ ಕಾಮಗಾರಿ ಮುಗಿಯುವ ವೇಳೆಗೆ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಆಡಳಿತ ಅವಧಿ ಮುಗಿದಿದೆ. ಹೀಗಾಗಿ ಬ್ರಿಜ್ ಪಕ್ಕದ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲಾಗದೆ ಇರುವುದರಿಂದ ಈ ಎರಡು ಗ್ರಾಮದ ನಡುವಿನ ರಸ್ತೆ ಹಾಳಾಗಿದ್ದು ದಿನಂಪ್ರತಿ ಈ ರಸ್ತೆ ಮೂಲಕ ತೆರಳುವ ಸಾವಿರಾರು ಸಂಚಾರರು ಹಾಗೂ ಕರ್ನಾಟಕ ಮಹಾರಾಷ್ಟ್ರಕ್ಕೆ ದಿನಂಪ್ರತಿ ವ್ಯವಹರಿಸುವ ಜನರು ಸ್ಥಳೀಯ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹೇಳಿದರು ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಪ್ರಯಾಣಿಕರು.
ಕಳೆದ ಐದು ವರ್ಷಗಳಿಂದ ಕರ್ನಾಟಕ ಮಹಾರಾಷ್ಟ್ರಕ್ಕೆ ಸಂಚರಿಸ ಬೇಕಾದರೆ ಈ ರಸ್ತೆ ಅನಿವಾರ್ಯ ದಿನಂಪ್ರತಿ ಸಾವಿರಾರು ವಾಹನಗಳು ಈ ರಸ್ತೆಯ ಮೇಲೆಯ ಸಂಚರಿಸ ಬೇಕು. ಆದೇ ರಸ್ತೆ ಹದಗೆಟ್ಟಿದ್ದು ಈಗಾಗಲೇ ಹಲವಾರು ಅಪಘಾತಗಳು ಸಂಭವಿಸಿವೆ.