ಉಡುಪಿ :

ಲಕ್ಷಾಂತರ ರೂಪಾಯಿಗೆ ಮೀನೊಂದು‌ ಮಾರಾಟವಾದ ಘಟನೆಯೊಂದು ಉಡುಪಿಯ ಮಲ್ಪೆ ಬಂದರಿನಲ್ಲಿ ನಡದಿದೆ.

ಮಲ್ಪೆಯಿಂದ ಸಮುದ್ರಕ್ಕೆ ಬಲರಾಂ ಬೋಟ್‌ನಲ್ಲಿ ತೆರಳಿದ್ದ ಮೀನುಗಾರರು ಬೀಸಿದ ಬಲೆಗೆ, ಗೂಳಿ ಮೀನು ಸಿಕ್ಕದ್ದು, ಹರಾಜು ಮೂಲಕ ಭರ್ಜರಿ ರೇಟ್‌ಗೆ ಮಾರಟವಾಗಿದೆ. ಗೋಳಿ ಎನ್ನುವ ಅಪರೂಪದ ಮೀನು ಇದಾಗಿದ್ದು, 20 ಕೆಜಿ ತೂಕದ ಮೀನು ಕೆಜಿಯೊಂದಕ್ಕೆ 9,060 ರಂತೆ, 1,81,200 ರೂಗಳಿಗೆ ಮಾರಾಟವಾಗಿದೆ.

ಗೂಳಿ ಮೀನು

ಗೂಳಿ ಮೀನು, ಬಹಳ ಅಪರೂಪದ ಮೀನಾಗಿದ್ದು ಔಷಧಿ ತಯಾರಿಕೆ ಬಳಕೆಯಾಗುತ್ತದೆ ಎನ್ನಲಾಗಿದೆ. ಮುಂಬೈನಲ್ಲಿ ಈ ಗೋಳಿ ಮೀನಿಗೆ ಹೆಚ್ಚಿನ ಬೇಡಿಕೆ ಇದೆ. ಈ ಮೀನು ಸಮುದ್ರದ ನಡುವೆ ಇರುವ ಬಂಡೆ ಕಲ್ಲಿನ ಸಮೀಪದಲ್ಲಿ ಕಂಡು ಬರುತ್ತದೆ.