ಚಿಕ್ಕೋಡಿ :
ವಿಧಾನ ಪರಿಷತ್ ಚುನಾವಣೆಯಲ್ಲಿ ಗೆದ್ದು ಬಹುಮತ ಪಡೆಯಬೇಕೆಂದು ಬಿಜೆಪಿ ಶತಾಯ ಗತಾಯ ಪ್ರಯತ್ನ ನಡೆಸಿದೆ ಹೀಗಾಗಿ ಮಾಜಿ ಸಿಎಂ ಯಡಿಯೂರಪ್ಪ ಅವರು ಜೆಡಿಎಸ್‌ಗೆ ಬಂಬಲ ನೀಡುವಂತೆ ಮನವಿ ಮಾಡಲಿದ್ದಾರೆಯಂತೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್ ಡಿ ಕಾಲೇಜ್ ಮೈದಾನದಲ್ಲಿ ಹಮ್ಮಿಕೊಂಡಿರುವ ಬಿಜೆಪಿ ಜನ ಸ್ವರಾಜ್ ಯಾತ್ರೆಗೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಚಾಲನೆ ನೀಡಿವ ಮೊದಲು ಪತ್ರಿಕಾಗೋಷ್ಠಿ ನಡೆಸಿ ಮಾತಾಡಿದರು ವಿಧಾನ ಪರಿಷತ್ 25 ಕ್ಷೇತ್ರಗಳ ಪೈಕಿ 20 ರಲ್ಲಿ ಮಾತ್ರ ಸ್ಪರ್ಧೆ ಮಾಡುತ್ತಿದ್ದೇವೆ.
ಅಭ್ಯರ್ಥಿಗಳ ಘೋಷಣೆ ಮಾಡುವ ಮುನ್ನವೇ ರಾಜ್ಯದಲ್ಲಿ ಪ್ರಚಾರ ಮಾಡಿದ್ದೇವೆ. ರಾಜ್ಯ ಹಾಗೂ ಕೇಂದ್ರದ ಸಚಿವರು, ಮುಖಂಡರು ಪ್ರಚಾರ ಮಾಡಲಿದ್ದಾರೆ. ನಾವು 20 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದರೂ ಕಾಂಗ್ರೆಸ್‌ನವರು ಮಾತ್ರ ಇದುವರೆಗೂ ಪಟ್ಟಿ ಬಿಟ್ಟಿಲ್ಲಾ. 8942 ಮತದಾರರು ಬೆಳಗಾವಿ ಜಿಲ್ಲೆಯಲ್ಲಿದ್ದಾರೆ. ಮಹಾಂತೇಶ ಕವಟಗಿಮಠ ಈ ಬಾರಿ ಮೊದಲೇ ಸುತ್ತಿನಲ್ಲಿ ಗೆಲುವು ಸಾಧಿಸಬೇಕು. ಹೋದಲ್ಲಿ ಎಲ್ಲ ಕಡೆಯೂ ಉತ್ತಮ ರೀತಿಯಲ್ಲಿ ಅಭಿಪ್ರಾಯ ಸಿಕ್ಕಿದೆ. 20 ಕ್ಷೇತ್ರದಗಳ ಪೈಕಿ 15 ಕ್ಷೇತ್ರದಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ. ಕಾರಣಾಂತರಗಳಿಂದ 3 ಕ್ಷೇತ್ರ ಗೆಲುವು ಕಷ್ಟಕರ ಆಗಲಿದೆ ಎಂದು ತಿಳಿಸಿದರು.
ಕಾಂಗ್ರೇಸ್ ನವರು ಹಣ ಹೆಂಡ ಜಾತಿಯ ವಿಷ ಬೀಜ ಬಿತ್ತಿ ಚುನಾವಣೆಯಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗುತ್ತಿದ್ದರು. ಪ್ರಧಾನಿ ಮೋದಿಯವರು ಕಳೆದ ಎಂಟು ವರ್ಷದಲ್ಲಿ ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದಾರೆ. ವಜ್ರಗಳ ರಾಶಿಯೇ ತುಂಬಿಹುದು ನಿನ್ನಲ್ಲಿ ಎನಾದರೇನು ಬಾಯಾರಿದವನಿಗೆ ನೀರಾದರೆಯಾ? ಎಂದು ಕವನ ಹೇಳುವ ಮೂಲಕ ಕಾಂಗ್ರೇಸ್ ಗೆ ಬಿಎಸ್ ವೈ ಟಾಂಗ್ ನೀಡಿದರು.
ಸಾಗರದಷ್ಟು ಕಾಂಗ್ರೇಸ್ ಬೆಳೆದಿದ್ದರೂ ಸಹ ಅದು ಯಾರ ಬಾಯಿಗೂ ನೀರಾಗದು. 75 ವರ್ಷದ ಕಾಂಗ್ರೆಸ್ ಆಡಳಿತ ಸಮುದ್ರದ ಉಪ್ಪು ನೀರಿನಂತಾಗಿದೆ ಇಡೀ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗ್ತಿದೆ. ದೇಶದ ಜನರು ಕಾಂಗ್ರೆಸ್‌ನ್ನ ತಿರಸ್ಕಾರ ಮಾಡ್ತಿದ್ದಾರೆ. ಎಲ್ಲ ಜನಾಂಗವನ್ನು ಒಂದೇ ತಾಯಿಯ ಮಕ್ಕಳಂತೆ ಬಿಜೆಪಿ ನೋಡ್ತಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರಿಗೆ ಮೊದಲನೇ ಪ್ರಾಶಸ್ತ್ಯದ ಮತವನ್ನ ನೀಡಿ ಅವರನ್ನ ಆರಿಸಿ ತರುವ ಮೂಲಕ ದೊಡ್ಡ ಅಂತರದಲ್ಲಿ ಗೆಲ್ಲಿಸಬೇಕು ಎಂದರು.
ಮಹಾಂತೇಶ ಕವಟಗಿಮಠ ವಿಧಾನಪರಿಷತ್ ಚುನಾವಣೆಯಲ್ಲಿ ಗೆಲವು ಸಾಧಿಸಬೇಕೆಂದು ಇಂದು ಸಾವಿರಾರು ಸಂಖ್ಯೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರನ್ನ ಒಂದು ಗೂಡಿಸಿ ಜನ ಸ್ವರಾಜ್ ಯಾತ್ರೆ ಮಾಡಿದಂತ್ತು ಆಯಿತು. ಆದರೆ, ಸ್ವ ಪಕ್ಷದವರೆ ಆದ ಬಾಲಚಂದ್ರ ಜಾರಕಿಹೊಳಿ ಹಾಗೂ ರಮೇಶ ಜಾರಕಿಹೋಳಿ ಇಬ್ಬರು ಮಾತ್ರ ಲಖನ ಜಾರಕಿಹೊಳಿ ಅವರನ್ನ ಬಿಜೆಪಿಯಿಂದ ಇಲ್ಲವೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿಯಾದ ಚನ್ನರಾಜ ಹಟ್ಟಿಹೊಳಿಯನ್ನು ಸೊಲಿಸಲು ಮುಂದಾಗಿದ್ದಾರೆ, ಆದರೆ, ಲಖನ ಜಾರಕಿಹೊಳಿ ಒಂದು ವೇಳೆ ವಿಧಾನ ಪರಿಷತ್‌ಗೆ ಸ್ಪರ್ಧಿಸಿದರೆ ಮಹಾಂತೇಶ ಕವಟಗಿಮಠಗೆ ಮುಳುವಾಗುತ್ತಾ ಎನ್ನುವುದು ಜಿಲ್ಲೆಯಲ್ಲಿ ಸಂಶಯ ವ್ಯಕ್ತವಾಗಿತ್ತಿದೆ.
ವರದಿ : ಬಸವರಾಜ ಗಿಡ್ಡೆಮಾಳಿ