ರಾಮನಗರ :

ನನ್ನ ಕಾರು ಪಲ್ಟಿಯಾಗಿದೆ ಎಂದು ಸುದ್ದಿ ವೈರಲ್ ಹಿನ್ನೆಲೆ ಸಂಸದ ಪ್ರತಾಪ ಸಿಂಹ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ ಕೇರಳ ಮೂಲದವರ ಕಾರು ಪಲ್ಟಿಯಾಗಿತ್ತು. ಬೆಂಗಳೂರಿನಿಂದ ಬರುವ ವೇಳೆ ನಾನು ಖಾಸಗಿ ಹೋಟೆಲ್‌ನಲ್ಲಿ ಊಟ ಮಾಡುವಾಗ ಈ ಅಪಘಾತ ಸಂಭವಿಸಿತು.

ಮೈಸೂರಿನಿಂದ ಬೆಂಗಳೂರು ಕಡೆಗೆ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತವಾಯಿತು. ಇನೋವಾ ಕಾರಿನ ಟೈಯರ್ ಬರೆಸ್ಟ್ ಆಗಿ ಪಲ್ಟಿ ಹೊಡೆಯಿತು. ನಾನು ನನ್ನ ಗನ್ ಮ್ಯಾನ್ ಹಾಗೂ ಡೈವರ್ ಕಾರಿನಲ್ಲಿದ್ದವರನ್ನ ಸೇವ್ ಮಾಡಿದ್ವಿ. ಕಾರಿನಲ್ಲಿದ್ದ ಕುಟುಂಬವರು‌ ಗಾಬರಿಗೊಂಡಿದ್ದರು. ಬಾಡಿಗೆ ಕಾರಿನಲ್ಲಿ ನಾನೇ ಬೆಂಗಳೂರಿಗೆ ಕಳಿಸಲಾಗಿದೆ. ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಅಷ್ಟೇ. ಈ ಬಗ್ಗೆ ಪೊಲೀಸರಿಗೂ ಮಾಹಿತಿ‌ ನೀಡಿದ್ದೇನೆ‌. ನನ್ನ ಕಾರು ಎಂದು ಪಕ್ಷದವರಲ್ಲ ಗಾಬರಿಗೊಂಡು‌ಸ್ಥಳಕ್ಕೆ ದೌಡಾಯಿಸಿದ್ರು. ನನಗೆ ಏನು ಆಗಿಲ್ಲ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ಅಪಘಾತದ ಬಗ್ಗೆ ಸ್ಪಷ್ಟನೆ ನೀಡಿದ ಸಂಸದ ಪ್ರತಾಪ‌ ಸಿಂಹ