ಉ.ಕ ಸುದ್ದಿಜಾಲ ಅಥಣಿ :

ಸಿದ್ದು ಸರ್ಕಾರದಿಂದ ಅಥಣಿ ವಿಧಾನಸಭಾ ಕ್ಷೇತ್ರಕ್ಕೆ ಅನುದಾನದ ಹೊಳೆ. ಸರ್ಕಾರ ರಚನೆಯಾಗಿ ಕೇವಲ ಒಂಬತ್ತು ತಿಂಗಳಿನಲ್ಲಿ ಅಥಣಿ ಮತಕ್ಷೇತ್ರಕ್ಕೆ 40 ಕೋಟಿ ರೂ. ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ ಎಂದುಅಥಣಿ ಶಾಸಕ ಲಕ್ಷ್ಮಣ್ ಸವದಿ ಹೇಳಿದ್ದಾರೆ.

ಇದೇ ಫೇ.18 ರಂದು ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆಶಿ ಅಥಣಿಗೆ ಆಗಮಿಸಲಿದ್ದಾರೆ. 1486 ಕೋಟಿ ರೂಪಾಯಿ ಬೃಹತ್ ಕಾಮಗಾರಿ ಯೋಜನೆಗೆ ಚಾಲನೆ ನೀಡಲಿದ್ದಾರೆ ಅಥಣಿ ಭಾಗದ ಅಮ್ಮಜೇಶ್ವರಿ ಏತ ನೀರಾವರಿ ಯೋಜನೆ ಕಾಮಗಾರಿ ಚಾಲನೆ ನೀಡಲಿದ್ದು, ಸುಮಾರು 11 ಹಳ್ಳಿಗಳಿಗೆ ಏತ ನೀರಾವರಿ ಮುಖಾಂತರ ಬೃಹತ್ ನೀರಾವರಿ ಯೋಜನೆ ದೊರೆಯಲಿದೆ.

9950 ಹೆಕ್ಟರ್ ಜಮೀನು ನೀರಾವರಿ ಜೊತೆಗೆ 13 ಕೆರೆ ತುಂಬಿಸುವ ಯೋಜನೆ. ಬಿಜೆಪಿ ಸರ್ಕಾರದ ಅವದಿಯಲ್ಲಿ ಮೊದಲನೇ ಹಂತದ ಅನುಮೋದನೆ ಪಡೆದುಕೊಂಡ ಕಾಮಗಾರಿ.

ಸಿಎಂ ಸಿದ್ದರಾಮಯ್ಯ ಎರಡನೇ ಹಂತದ ಕಾಮಗಾರಿಗೆ ಅನುಮೋದನೆ ನೀಡಲಿದ್ದಾರೆ. ಅನುಮೋದನೆ ಜೊತೆಗೆ ಮೊದಲೇ ಹಂತ ಎರಡನೇ ಹಂತದ ಕಾಮಗಾರಿ ಹಣ ಬಿಡುಗಡೆ ಕೂಡಾ ಮಾಡಲಿದ್ದಾರೆ ಎಂದು ಅಥಣಿ ಶಾಸಕ ಮಾಹಿತಿ ಹಂಚಿಕೊಂಡಿದ್ದಾರೆ.