ಅಂಕಣ : ದೀಪಕ ಶಿಂಧೆ – ಪತ್ರಕರ್ತ
ಹಾಯ್ ಎಲ್ಲರೂ ಹ್ಯಾಗಿದೀರಿ?? ಐ ಹೋಪ್ ಎವರಿಥಿಂಗ್ ಈಜ್ ವೆಲ್….
ಇನ್ಸ್ಟಾಗ್ರಾಂ,ಟೆಲಿಗ್ರಾಂ,ಪೆಸ್ ಬುಕ್ ಸ್ಟೋರಿಗಳು ಮತ್ತು ವಾಟ್ಸಪ್ಪಿನ ಸ್ಟೇಟಸ್ಸುಗಳನ್ನ ಸಾಲು ಸಾಲಾಗಿ ಇಡೋದು ಆಗಾಗ ಬದಲಿಸುತ್ತ ಇರೋದು ಒಂದು ಮಾನಸಿಕ ಕಾಯಿಲೆ ಕೆಲವರು ಇಡುವ ಸ್ಟೇಟಸ್ ಗಳಿಂದಲೇ ಅವರ ಮನಸ್ಥಿತಿಯನ್ನ ಸುಲಭವಾಗಿ ಜಡ್ಜ್ ಮಾಡಬಹುದು ಅಂತ ನನ್ನ ಆಪ್ತ ಮನಶಾಸ್ತ್ರಜ್ಞ ವೈದ್ಯರೊಬ್ಬರು ಹೇಳಿದ ಬಳಿಕವಷ್ಟೇ ಒಂದು ಸಣ್ಣ ಜಾಗೃತಿ ಮೂಡಿಸುವ ಪುಟ್ಟ ಜವಾಬ್ದಾರಿಯನ್ನ ಹೊತ್ತುಕೊಂಡು ಈ ಲೇಖನ ಬರೆಯಲು ಕುಳಿತಿದ್ದೇನೆ.
ಇದನ್ನು ಬರೆದು ಎಡಿಟ್ ಮಾಡಿ ಕರೆಕ್ಷನ್ ಮಾಡಿ ನಿಮಗೆ ಪೋಸ್ಟ ಮಾಡುವಷ್ಟರ ನಡುವೆ ಮತ್ತೆ ಅದೆಷ್ಟು ಮನಸ್ಸುಗಳು ವಿನಾಕಾರಣದ ಮನಸ್ತಾಪ ಮಾಡಿಕೊಂಡು ನೋಯುತ್ತ ಇರುತ್ತವೋ?? ಅದೆಷ್ಟು ಸುಂದರವಾದ ಸಂಭಂಧಗಳು ತಮ್ಮ ಬಾಂಧವ್ಯವನ್ನೇ ಕಳೆದುಕೊಂಡು ನಲುಗುತ್ತ ಇರುತ್ತವೋ ಯಾರಿಗೆ ಗೊತ್ತು.??
ಬಹಳಷ್ಟ ಸಲ ಹೊಸದಾಗಿ ಮೊಬೈಲ್ ಖರೀದಿಸುವ ಸಮಯದಲ್ಲಿ ಕ್ಯಾಮೆರಾ ಎಷ್ಟು?? ಮೆಗಾ ಪಿಕ್ಸಲ್ ಎಷ್ಟು?? ಇನ್ ಬಿಲ್ಟ ಸ್ಟೋರೇಜ್ ಮತ್ತು ಎಕ್ಸಪಾಂಡೆಬಲ್ ಮೆಮೋರಿ ಎಷ್ಟು, ರ‌್ಯಾಮ್ ಎಷ್ಟಿದೆ ಅಂತ ಲೆಕ್ಕ ಹಾಕುವ ನಾವೆಲ್ಲ ನಾಲ್ಕೈದು ಸಾವಿರದಿಂದ ಆರಂಭಿಸಿ ಲಕ್ಷದ ಮೊಬೈಲುಗಳ ತನಕ ನಮ್ಮ ಆರ್ಥಿಕ ಅನುಕೂಲಕ್ಕೆ ತಕ್ಕಂತೆ ಖರೀದಿ ಮಾಡುತ್ತೇವೆ.
ನಾನು ಎಸ್ ಟಿ ಡಿ,ಐ ಎಸ್ ಡಿ,ಕ್ವಾಯಿನ್ ಬಾಕ್ಸ್,ಲ್ಯಾಂಡ್ ಲೈನ್,ಕಾರ್ಡಲೆಸ್ ಪೋನುಗಳಿಂದ ಹಿಡಿದು ಕೀ ಪ್ಯಾಡ್ ಮೊಬೈಲ್, ಟಚ್ ಸ್ಕ್ರೀನ್ ಮತ್ತು ಇತ್ತೀಚೆಗಿನ ಪೈವ್ ಜಿ ಮೊಬೈಲ್ ಗಳವರೆಗೆ ಬೆಳವಣಿಗೆಗಳನ್ನ ಕಣ್ಣಾರೆ ಕಂಡಿರುವದರಿಂದ
ಮತ್ತು ಬಹಳಷ್ಟು ಜನರು ಕೆಲವು ತಿಂಗಳುಗಳ ಅಂತರದಲ್ಲೇ ಎರಡು ಮೂರು ಮೊಬೈಲ್ ಗಳನ್ನ ವಿನಾಕಾರಣ ಬದಲಿಸುವ ಗೀಳಿಗೆ ಬಿದ್ದು ತಮ್ಮ ಹಣ ವ್ಯಯಿಸುವದರ ಜೊತೆಗೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತ ಇದ್ದಾರೆ ಅನ್ನುವದನ್ನ ಅರ್ಥ ಶಾಸ್ತ್ರ ಉಪನ್ಯಾಸಕರೊಬ್ಬರು ನಾನೇಕೆ ಬಡವನಯ್ಯ ಅನ್ನುವ ಪದಗಳೊಂದಿಗೆ ಬಹಳ ಗಂಭೀರವಾಗಿ ಹೇಳಿದ್ದರಿಂದ
ಇದೆಲ್ಲ ಕೇವಲ ಶೋಕಿಗಾಗಿ ಮೊಬೈಲ್ ಬಳಸುವವರ ಕಥೆ ಆದರೆ ಇನ್ನೂ ಕೆಲವರು ಆರಂಭದಲ್ಲಿ ಹತ್ತು ಸಾವಿರದೊಳಗಿನ ಮೊಬೈಲ್ ಇಂದಲೇ ತಮ್ಮದೇ ಆದ ಒಂದು ಬ್ಲಾಗ್,ವ್ಲಾಗ್,ಯೂಟ್ಯೂಬ್ ಚಾನಲ್ ಅಂತ ಆರಂಭಿಸಿ ತಿಂಗಳಿಗೆ ಲಕ್ಷಾಂತರ ರೂಪಾಯಿ ದುಡಿಯುತ್ತಿರುವದು ಕೂಡ ಹೊಸದೇನೂ ಅಲ್ಲವಾದರೂ ನಾನು ಹೇಳ ಹೊರಟಿರುವದು ಪ್ರಚಾರದ ಗೀಳಿಗೆ ಬಿದ್ದು ತಮ್ಮ ಅಮೂಲ್ಯವಾದ ಸಮಯ,ಮತ್ತು ಹಣದ ಜೊತೆಗೆ ಒಂದಷ್ಟು ಬಂಧಗಳ ಬೆಸುಗೆಯನ್ನ ಹಾಳುಮಾಡಿಕೊಳ್ಳುತ್ತಿರುವವರ ಬಗ್ಗೆ ಅಂದರೆ ನಿಮಗೆ ಅಚ್ಚರಿ ಆಗಬಹುದು.
ಐವತ್ತು,ಎಪ್ಪತ್ತು ರೂಪಾಯಿಯ ಡಾಟಾ ಪ್ಯಾಕ್ ಅನ್ನುವದು ಯಾವಾಗ ಹತ್ತಿಪ್ಪತ್ತು ರೂಪಾಯಿಗೆ ಮತ್ತು ಅನ್ ಲಿಮಿಟೆಡ್ ಇನ್ ಕೆಬಿಪಿಎಸ್ ಅನ್ನುವ ರೇಂಜಿಗೆ ಬಂತೋ ಅಂದಿನಿಂದ ಆರಂಭವಾದ ಸೋಸಿಯಲ್ ಮೀಡಿಯಾ ಅನ್ನುವದು ಸಮರ್ಥವಾಗಿ ಬಳಕೆ ಆಗಿದ್ದಕ್ಕಿಂತ ಅನಾಹುತ ಗಳಿಗೆ ದಾರಿ ಮಾಡಿ ಕೊಡುತ್ತಿರುವದೇ ಹೆಚ್ಚು ಅನ್ನುವದು ಹಲವರ ಅಭಿಪ್ರಾಯ.
ಇಷ್ಟಕ್ಕೂ ನನ್ನ ಬರವಣಿಗೆಗಳನ್ನ ನೋಡಿದ ತಕ್ಷಣ ಓಹ್ ಇದು ನಿಮ್ಮ ಅಭಿಪ್ರಾಯ ಬಿಡಿ ಬ್ರದರ್ ಯಾವತ್ತಿದ್ರೂ ನಿಮ್ಮದು ನೆಗೆಟಿವ್ ಥಿಂಕಿಂಗ್ ಅಂತ ಮೂಗು ಮುರಿಯುವ ಜನರ ನಡುವೆಯೇ ಅಣ್ಣಾ ಇದೆ ಓಪಿನಿಯನ್ ನಂದೂ ಇತ್ತು ಆದ್ರೆ ನಮಗ್ ಬರಿಯಾಕ್ ಬರೂದಿಲ್ಲರೀ ನೀವ್ ಬರದದ್ದು ಭಾಳ ಇಷ್ಟಾ ಆತು ಅಂದ ಹಲವು ಆತ್ಮೀಯರ ಜೊತೆಗೆ ಆಗಾಗ ಮಾತನಾಡಿದ ವಿಷಯಗಳನ್ನೇ ಅಕ್ಷರಕ್ಕೆ ಇಳಿಸುವ ಮೂಲಕ ನಿಮ್ಮಿಂದ ದೂರದಲ್ಲಿ ಇದ್ದರೂ ಬರವಣಿಗೆಯಿಂದಲೇ ನಿಮ್ಮ ಜೊತೆಗೆ ಬೆರೆಯುವ ಪುಟ್ಟ ಪ್ರಯತ್ನ ನನ್ನದು.
ಕೇವಲ ಗುಡ್ ಮಾರ್ನಿಂಗ್ಗು, ಡ್ ನೈಟಗಳಿಗೆ ಅಥವಾ ಎಲ್ಲೋ ತಿಂದು, ಉಂಡ,ಮೋಜು ಮಸ್ತಿ ಮಾಡಿದ ಪೋಟೊ, ವಿಡಿಯೋಗಳನ್ನ ಹಂಚಿಕೊಳ್ಳುವ ಮೂಲಕ ಇನ್ನೊಬ್ಬರ ಹೊಟ್ಟೆ ಉರಿಸುವ ಕೆಲಸ ಮಾಡುವದಕ್ಕಿಂತ ನಾವು ಇಡುವ ಸ್ಟೇಟಸ್ಸು ಸೋತವರ ಗೆಲುವಿಗೆ ಸ್ಪೂರ್ತಿ ಆದರೆ,ನೊಂದವರಿಗೆ ಒಂದಷ್ಟು ಧೈರ್ಯ ತುಂಬಿದರೆ ಅದಕ್ಕಿಂತ ಒಳ್ಳೆಯದು ಇನ್ನೇನಿದೆ ಅಲ್ಲವಾ??
ಹಾಗಾದರೆ ಮೊಬೈಲ್ ಗಳಲ್ಲಿ ಸ್ಟೇಟಸ್ ಇಡೋದು ತಪ್ಪಾ? ಅನ್ನುವ ನಿಮ್ಮ ಖಾರವಾದ ಪ್ರಶ್ನೆಗೆ ನೀವು ಇಡುವ ಸ್ಟೇಟಸ್ಸಿನಿಂದ ಮತ್ತೊಬ್ಬರಿಗೆ ಅಲ್ಲದೆ ಇದ್ದರೂ ಕನಿಷ್ಟ ನಿಮಗಾದರೂ ಲಾಭ ಇದ್ದರೆ ಖಂಡಿತ ಸ್ಟೇಟಸ್ ಇಡಿ ಬೇಡ ಅನ್ನುವದಿಲ್ಲ ಯಾರದೋ ಮನಸ್ಸು ನೋಯಿಸುವದಕ್ಕಿಂತ ಒಂದಷ್ಟು ಸಮಾಧಾನ, ಸಾಂತ್ವನ ನೀಡಿದ ಅಥವಾ ಬದುಕಿನ ಬಗ್ಗೆ ಒಲವು ಮೂಡಿಸಿದ ಕನಿಷ್ಠ ಆತ್ಮ ಸಂತೃಪ್ತಿ ಆದರೂ ನಿಮ್ಮದಾಗಲಿ ಅನ್ನೋದಷ್ಟೇ ನನ್ನ ಉತ್ತರ.
ಯಾಕೆಂದರೆ ರೀಲ್ಸ ಮಾಡಿ ಲೈಕು ಪಡೆದ ಹುಡುಗಿಯೊಬ್ಬಳು ಚಾಟಿಂಗಿನಲ್ಲಿ ಪ್ರೀತಿಗೆ ಬಿದ್ದು ದೂರದ ರಾಜಸ್ತಾನದಿಂದ ರೈಲು ಹತ್ತಿ ಕರ್ನಾಟಕಕ್ಕೆ ಬಂದು ತನ್ನ ಗೆಳೆಯನನ್ನ ಹುಡುಕಿಕೊಂಡು ಹೋಗಿ ಅವನಿಗೆ ಮದುವೆ ಆಗಿ ಮಕ್ಕಳಿರುವ ಸತ್ಯ ತಿಳಿದಾಗ ಆಕಾಶವೇ ಕಳಚಿ ಬಿದ್ದಂತೆ ಬೋರಾಡಿ ಅತ್ತಿದ್ದರಿಂದ ಹಿಡಿದು ಭಾರತದ ಅಂಜುಮ್ ಅನ್ನುವ ಮಹಿಳೆ ಒಬ್ಬಳು ತನ್ನ ಮದುವೆ ಆಗಿ ಮಕ್ಕಳಿದ್ದರೂ ಕೂಡ ನೇಪಾಳದ ಮಾರ್ಗವಾಗಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿಯ ಪೆಸ್ ಬುಕ್ ಗೆಳೆಯನನ್ನ ಮದುವೆ ಆಗಿರುವ ತನಕ ಹಾಗೂ ಕೆಲವಷ್ಟು ಜನರು ಮೊಬೈಲಿನಲ್ಲಿ ಸ್ಟೇಟಸ್ ಇಡುವ ಹುಚ್ಚು ಹುಕಿಯಲ್ಲೇ ಡೇಂಜರಸ್ ಸ್ಟಂಟ್ ಮಾಡಲು ಹೋಗಿ ಜೀವ ಕಳೆದುಕೊಂಡಿರುವ ಹಲವಾರು ಕಹಿ ಘಟನೆಗಳು ನಡೆದಿರುವದು ಇಂತಹದ್ದೇ ವಾಟ್ಸಪ್, ಫೇಸಬುಕ್ ಮತ್ತು ಇನಸ್ಟಾಗ್ರಾಂ ಗಳಲ್ಲಿ ಆದ ಪರಿಚಯಗಳಿಂದ ಅನ್ನೋದು ನಿಮಗೆಲ್ಲ ನೆನಪಿರಲಿ.
ತಮಗೆ ತಿಳಿದೋ – ತಿಳಿಯದೆಯೋ ತಮ್ಮ ಚಲನ ವಲನಗಳನ್ನ ತಾವೇ ಬಿಟ್ಟುಕೊಡುವ ಮೂಲಕ ಸಾಕಷ್ಟು ಜನರು ಅಪಾಯಕ್ಕೆ ಸಿಲುಕಿರುವ,ಮತ್ತು ಆರ್ಥಿಕ ಹಾನಿಗೆ ಒಳಗಾಗಿರುವ ಸಾಧ್ಯತೆಗಳನ್ನೂ ಕೂಡ ಅಲ್ಲಗಳೆಯುವಂತೆ ಇಲ್ಲ ಆದ್ದರಿಂದ ಮತ್ತು ಅಯ್ಯೋ ಅವರು ಯಾರೂ ನನ್ನನ್ನ ಟೂರಿಗೋ, ಪಾರ್ಟಿಗೋ, ಮದುವೆಗೋ, ಸೀಮಂತಕ್ಕೋ, ಶುಭಕಾರ್ಯಕ್ಕೋ ಕರೆಯಲಿಲ್ಲ ಈಗ ಸ್ಟೇಟಸ್ ಇಟ್ಟಿದ್ದಾರೆ ಅನ್ನುವ ಕ್ಷುಲ್ಲಕ ಕಾರಣಕ್ಕೆ ಉಂಟಾಗುವ ಚಿಕ್ಕ ಪುಟ್ಟ ಮನಸ್ತಾಪಗಳಿಂದ ಹಿಡಿದು ಕಣ್ತಪ್ಪಿನಿಂದ ಸಾಮಾಜಿಕವಾಗಿ ವೈರಲ್ ಆದ ಖಾಸಗಿ ಕ್ಷಣಗಳ ಪೋಟೊ, ವಿಡಿಯೋಗಳೇ ಬಹಳಷ್ಟು ಸಂಸಾರಗಳಲ್ಲಿ ಬಿರುಕು ಮೂಡಿಸುವದರ ಜೊತೆಗೆ ಸಮಾಜದಲ್ಲಿ ಸಾಮರಸ್ಯ ಕದಡುವದಕ್ಕೂ ಕಾರಣವಾಗುತ್ತಿರುವದು ಇಂದಿನ ದುರಂತ.
ಅಂದ ಹಾಗೆ ನಾವು ಇಟ್ಟಿರುವ ಸ್ಟೇಟಸ್ಸ ಅನ್ನು ಯಾರು ನೋಡಿದರು,ಯಾರು ಕಾಮೆಂಟ್ ಮಾಡಿದರು,ಮತ್ತು ಅದನ್ನ ಯಾರು ನೋಡಿಯೂ ಪ್ರತಿಕ್ರಿಯೆ ಕೊಡಲಿಲ್ಲ ಅನ್ನುವದರಿಂದ ಹಿಡಿದು ಅವರೇನು ಸ್ಟೇಟಸ್ ಇಟ್ಟಿದ್ದಾರೆ ಅನ್ನುವದರ ಮೇಲೆಯೇ ಹುಟ್ಟಿಕೊಳ್ಳುವ ಊಹಾಪೋಹಗಳು ಹಲವಾರು ಬಾರಿ ನಮ್ಮ ಆಪ್ತವಲಯದಲ್ಲಿ ಮತ್ತು ಆತ್ಮೀಯ ಗೆಳೆಯರಲ್ಲಿ ಒಂದಷ್ಟು ವಿನಾಕಾರಣದ ಹಗೆಯ ಹೊಗೆ ಎಬ್ಬಿಸಿ ಉತ್ತಮ ಸಂಬಂಧಗಳನ್ನು ಹಾಳುಗೆಡವದರಲಿ ಅನ್ನುವ ಕಾರಣಕ್ಕಾಗಿ
ಮತ್ತು ನಾನು ಯಾರನ್ನೋ ಪರಿಚಯ ಮಾಡಿಕೊಳ್ಳುವಾಗ ಅವರ ಗುಣ ಮತ್ತು ಸ್ವಭಾವ ನೋಡಿ ಸ್ನೇಹಿತನಾಗುತ್ತೆನೆಯೇ ಹೊರತು ಉಳಿದವರಂತೆ ಯಾವುದೋ ಲಾಭಿಗಾಗಿ ಪರಿಚಯ ಮಾಡಿಕೊಳ್ಳುವದು,ಪರಿಚಿತರು ಅನ್ನುವ ನೆಪವನ್ನೇ ಮುಂದೆ ಇಟ್ಟುಕೊಂಡು ಅವರಿಂದ ಲಾಭ ಪಡೆದುಕೊಳ್ಳುವದು ನನ್ನ ಜಾಯಮಾನವೇ ಅಲ್ಲವಾದ್ದರಿಂದ ಹಾಗೂ ಅಸಲಿಗೆ ಅವರು ಬಡವರಾ?? ಶ್ರೀಮಂತರಾ?? ಮದ್ಯಮ ವರ್ಗದವರಾ? ಮೇಲ್ಜಾತಿಯವರಾ??
ಒಕ್ಕಲಿಗರಾ, ಬಂಟರಾ, ಬ್ರಹ್ಮಣರಾ,ಅಥವಾ ಓಬಿಸಿ ಯಾ? ನಮ್ಮದೇ ಕಾಸ್ಟಾ? ಅನ್ನುವ ವಿವಿಧ ಬಗೆಯ ಸ್ಟೇಟಸ್ ಗಳ ಬಗ್ಗೆಯೇ ನಾನು ಯೋಚಿಸುವದಿಲ್ಲ ವಾದ್ದರಿಂದ ಮತ್ತು ಖಾಲಿ ಕುಳಿತಾಗಲೋ,ಅಥವಾ ಸಮಯ ಕಳೆಯುವದಕ್ಕೋ ಕೆಲವರ ಮೊಬೈಲ್ ಸ್ಟೇಟಸ್ ನೋಡುತ್ತೆನೆಯೇ ಹೊರತು ಯಾವ ಭಾವನೆಗಳು ನನ್ನಲ್ಲಿ ಮನೆ ಮಾಡಿರುವದಿಲ್ಲ ಅನ್ನುವದು ನನ್ನ ಮತ್ತು ನಿಮ್ಮೆಲ್ಲರ ಅಭಿಪ್ರಾಯ ವಾದಾಗ ಮಾತ್ರ ಈ ಜಂಝಾಟದ ಬದುಕಿನಲ್ಲಿ ಒಂದಷ್ಟು ಶಾಂತಿ ಮತ್ತು ನೆಮ್ಮದಿ ನೆಲೆಸಲು ಸಾಧ್ಯ ಅನ್ನುವ ಕಾರಣಕ್ಕೆ…..
ಮೊಬೈಲ್ ಎಂಬ ಮಾಯೆ ಅನಿವಾರ್ಯ ಸಾಧನ ಅಂತ ಬಳಸಬೇಕೆ ಹೊರತು ಹೋದ್ವಾ,ಬಂದ್ವಾ,ತಿಂದ್ವಾ ಉಂಡ್ವಾ?? ಅನ್ನುವ ಖಾಲಿ ಪೀಲಿ…ಸ್ಟೇಟಸ್ ಇಡುವ ಗೀಳು ನಮಗೆ ಗೋಳಾಗಿ ಪರಿಣಮಿಸದಿರಲಿ ಅನ್ನುವ ಆಶಯದೊಂದಿಗೆ ಮತ್ತೆ ಸಿಗೋಣ ಅಲ್ಲಿಯವರೆಗೂ ಟೇಕ್ ಕೇರ್…ಬೈ -ಬೈ…ಸಿ ಯು ಅಗೇನ್!!!