ಉ.ಕ ಸುದ್ದಿಜಾಲ ಬೆಳಗಾವಿ : 

ಸಂಕ್ರಾತಿ ಬಳಿಕ ಸಚಿವ ಸಂಪುಟ ಬದಲಾವಣೆಯಾಗುತ್ತೆ ಎನ್ನುವ ಮಾತುಗಳು ರಾಜ್ಯದ ಹಳ್ಳಿ ಹಳಿಗಳಲ್ಲೂ ಸದ್ಯ ಚರ್ಚೆ ನಡೆಯುತ್ತಲೇ ಇದೆ. ಆದರೆ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕಾಗವಾಡ ಹಾಗೂ ಅಥಣಿ ಕ್ಷೇತ್ರದ ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿಗೆ ವಲಸೆ ಬಂದು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರಾರೆ. ಆದರೆ, ಸಂಕ್ರಾತಿ ಬಳಿಕ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಬಂದ ವಲಸಿಗರಿಗೆ ಸಿಗುತ್ತಾ ಸಚಿವ ಸ್ಥಾನ ಎನ್ನುವುದು ಈಗ ಪ್ರಶ್ನೆಯಾಗಿ ಉಳದಿದೆ.

ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುವುದು ಹೊಸದೆನಲ್ಲ. ಆದರೆ, ಸರ್ಕಾರ ರಚಿಸಲು ಸಹಾಯ ಮಾಡಿ ಬಿಜೆಪಿಗೆ ಬಂದ ವಲಸಿಗರಿಗೆ ಬಿಜೆಪಿ ಸರ್ಕಾರ ಸಚಿವ ಸ್ಥಾನ ನೀಡುತ್ತಾ ಇಲ್ಲವೇ ಕಳೆದ ಬಾರಿಯಂತೆ ಮತ್ತೆ ಸಚಿವ ಸ್ಥಾನ ನೀಡದೆ ನಿರಾಸೆ ಮಾಡುತ್ತಾ? ಇಲ್ಲವೇ ವಲಸಿಗ ಶಾಸಕರಿಗೆ ಸಚಿವ ಸ್ಥಾನ ನೀಡುತ್ತಾರಾ? ಎನ್ನುವುದು ನೂತನ ಸಚಿವ ಸಂಪುಟದಲ್ಲಿ ತಿಳಿಯಬೇಕಿದೆ‌. ಸದ್ಯ ಅಥಣಿ ಶಾಸಕ ಮಹೇಶ ಕುಮಟಳ್ಳಿ ಅಂತು ನನಗೆ ಸಚಿವ ಸ್ಥಾನ ನೀಡಿ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಈ ಬಾರಿ ಸಚಿವ ಸ್ಥಾನ ನೀಡುವಂತೆ ಒತ್ತಾಯ ಮಾಡುತ್ತೇನೆ. ರಾಜ್ಯ ಹಾಗೂ ಕ್ಷೇತ್ರ ಅಭಿವೃದ್ಧಿ ಆಗುವಂತಹ ಸ್ಥಾನ ನೀಡಲಿ ಪಕ್ಷದ ವರಿಷ್ಠರು ಹಾಗೂ ಸಿಎಂ ಯಾವುದೇ ಸ್ಥಾನಮಾನ ನೀಡಿದರೂ ನಿಭಾಯಿಸುತ್ತೇನೆ. ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಹೇಳುತ್ತಿದ್ದಾರೆ.

ಅಥಣಿ ಶಾಸಕ ಒಂದು ಕಡೆ ಸಚಿವ ಸ್ಥಾನ ನೀಡಿ ಎಂದು ಹೇಳಿದರೆ ಇನ್ನೂಬ್ಬ ವಲಸಿಗರಾದ ಕಾಗವಾಡ ಶಾಸಕ ಶ್ರೀಮಂತವಪಾಟೀಲ ಹೇಳೊದು ಹೀಗೆ ನಾನು ಮಂತ್ರಿ ಸ್ಥಾನ ಬೇಡಿಲ್ಲ. ಅವರಾಗೆ ಕೊಟ್ಟರೆ ತೆಗೆದುಕೊಳ್ಳುತ್ತೇನೆ. ಬೊಮ್ಮಾಯಿ ಸಂಪುಟದಲ್ಲಿ ಬೇಕಾದರೆ ನಮ್ಮನ್ನ ತೆಗೆದುಕೊಳ್ಳಿ, ನಾವು ಕೆಲಸ ಮಾಡಲು ಸಿದ್ದ, ನಮ್ಮನ್ನ ಸಚಿವ ಸಂಪುಟದಿಂದ ಬಿಟ್ಟರು ಕೂಡಾ ನಾವೆನೂ ನಾರಾಜ ಇಲ್ಲ. ಸಚಿವ ಸ್ಥಾನಕ್ಕಾಗಿ ಯಾರಿಗೂ ಲಾಭಿ‌ ಮಾಡಿಲ್ಲ, ಸಚಿವ ಸ್ಥಾನ ಕೊಡಿ ಎಂದು ಕೇಳಿಲ್ಲ. ನಾನು ನನ್ನ ಕ್ಷೇತ್ರದ ಜನರ ಕೆಲಸಕ್ಕಾಗಿ ದುಡಿಯುತ್ತಿದ್ದೇನೆ ಹೊರತೆ ಸಂಪುಟ ವಿಸ್ತರಣೆ ಬಗ್ಗೆ ತೆಲೆ ಕೆಡಸಿಕೊಂಡಿಲ್ಲ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳತ್ತಿದ್ದಾರೆ.

ಕಳೆದೆರಡು ದಿನಗಳ ಹಿಂದೆ ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ‌ ಅಥಣಿ ಆರ್ ಎಸ್ ಎಸ್ ಮುಖಂಡರಿಗೆ ಬೇಟಿ ಮಾಡುವುದರ ಮೂಲಕ ಸಚಿವ ಸ್ಥಾನಕ್ಕೆ ಲಾಭಿ ಮಾಡುತ್ತಿದ್ದಾರೆ‌. ತಮ್ಮ ಆಪ್ತರಿಗೂ ಯಾವುದೇ ಮಾಹಿತಿ ನೀಡದೆ ಅಥಣಿ ಆರ್‌ಎಸ್‌ಎಸ್ ಮುಖಂಡರು ಹಾಗೂ ಉತ್ತರ ಕರ್ನಾಟಕ ಪ್ರಾಂತ್ಯ ಸಂಚಾಲಕರಾದ ಅರವಿಂದರಾವ್​​ ದೇಶಪಾಂಡೆ ಅವರನ್ನ ಭೇಟಿ ಮಾಡಿ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಇದು ಒಂದು ಸಹಜವಾದ ಭೇಟಿ, ಇದರಲ್ಲಿ ವಿಶೇಷ ಅರ್ಥ ಇಲ್ಲ. ನಾನು ಈ ಕಡೆ ಬಂದಾಗ ಹಿರಿಯರನ್ನು ಭೇಟಿಯಾಗುತ್ತೇನೆ. ಸಚಿವ ಸ್ಥಾನದ ಬಗ್ಗೆ ನಾನು ಹೆಚ್ಚು ಒತ್ತು ನೀಡಿಲ್ಲ, ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯುತ್ತೇನೆ. ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನದ ಬಗ್ಗೆ ಹೈಕಮಾಂಡ್​ಗೆ ತಿಳಿಸಲಾಗಿದೆ. ವರಿಷ್ಠರು ಯಾವುದೇ ತೀರ್ಮಾನ ತೆಗೆದುಕೊಂಡರು ನಾವು ಬದ್ಧರಾಗಿರುತ್ತೇವೆ ಎನ್ನುತ್ತಿದ್ದಾರೆ. ಆದರೆ, ರಮೇಶ ಜಾರಕಿಹೊಳಿ ಕೂಡಾ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.

ಒಟ್ಟಿನಲ್ಲಿ ವಲಸಿಗ ಶಾಸಕರಾದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಅಥಣಿ ಶಾಸಕ‌ ಮಹೇಶ ಕುಮಟಳ್ಳಿ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಳಲ ಈ ಮೂವರು ತೆರೆಮರೆಯಲ್ಲಿ ಸಚಿವ ಸ್ಥಾನಕ್ಕೆ ಕಸರತ್ತು ನಡೆಸಿದ್ದು ಬೊಮ್ಮಾಯಿ ಸರ್ಕಾರದಲ್ಲಿ ಈ ಮೂವರಲ್ಲಿ ಯಾರಿಗೆ ಸಚಿವ ಸ್ಥಾನ ಸಿಗುತ್ತೆ ಕಾಯ್ದು ನೋಡಬೇಕಿದೆ.