ಉ.ಕ ಸುದ್ದಿಜಾಲ ಅಥಣಿ :

ಬೆಳಗಾವಿ ಚಳಿಗಾಲಾ ಅಧಿವೇಶನ ಈಗಾಗಲೇ ಪ್ರಾರಂಭವಾಗಿದ್ದು ಇಡೀ‌ ಸರ್ಕಾರವೇ ಬೆಳಗಾವಿಯಲ್ಲಿ ಬಿಡಿ ಬಿಟ್ಟಿದೆ. ಹೀಗಾಗಿ ಬಡಳಗಾವಿ ವಿಭಜನೆ ಮಾಡಿ ಎಂದು ಈಗಾಗಲೇ ಹಲವಾರು ದಶಕಗಳಿಂದ ಬೇಡಿಕೆಗಳು ಕೇಳಿ ಬರುತ್ತಿವೆ.

ಹೀಗಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಸಲುವಾಗಿ ಇದೇ ಡಿ.11 ಸೋಮವಾರದಂದು ಅಥಣಿ ಬಂದ್ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ಚಿಕ್ಕೋಡಿಯಲ್ಲೂ ಕೂಡಾ ಚಿಕ್ಕೋಡಿ ಜಿಲ್ಲೆಯಾಗುವಂತೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಭಾಗಿಯಾಗಲಿದ್ದಾರೆ.

ಬೆಳಗಾವಿ ವಿಭಜನೆ ವಿಚಾರ ಅಥಣಿ ನೂತನ ಜಿಲ್ಲೆಗೆ ಹೆಚ್ಚಿದ ಬೇಡಿಕೆ. ಅಥಣಿ ಪಟ್ಟಣವನ್ನ ನೂತನ ಜಿಲ್ಲೆಯಾಗಿ ಘೋಷಣೆ ಮಾಡುವಂತೆ ಪಟ್ಟು ಅಥಣಿ ಜಿಲ್ಲೆ ಮಾಡುವಂತೆ ಡಿ.11 ಕ್ಕೆ ಅಥಣಿ ಬಂದ್ ಮಾಡಲು ನಿರ್ಧಾರ ಅಥಣಿ ಜಿಲ್ಲಾ ಹೋರಾಟ ಸಮಿತಿಯಿಂದ ಅಥಣಿ ಬಂದ್ ಗೆ ಕರೆ…

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಜಿಲ್ಲಾ ವಿಭಜನೆಯ ಬಿಸಿ ಮುಟ್ಟಿಸಲು ಮುಂದಾದ ಅಥಣಿ ಜನತೆ ಅಥಣಿ ಜಿಲ್ಲಾ ಹೋರಾಟಕ್ಕೆ ವಿವಿಧ ಸಂಘಟನೆಗಳು ಕೂಡಾ ಸಾಥ್ ನೀಡಿವೆ.

ಚಿಕ್ಕೋಡಿ ಜಿಲ್ಲೆಯಾಗುವಂತೆ ಕಳೆದ 20 ವರ್ಷಗಳಿಂದ ಚಿಕ್ಕೋಡಿ ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾ ಹೋರಾಟ ಸಮಿತಿ ನಿರಂತರ ಹೋರಾಟ ಮಾಡುತ್ತಿದೆ. ಆದರೆ ಸರ್ಕಾರ ಇನ್ನೂವರಿಗೂ ಜಿಲ್ಲೆಯನ್ನಾಗಿ ಘೋಷಣೆ ಮಾಡಿಲ್ಲ.

ಸದ್ಯ ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುವ ಅಧಿವೇಶದಲ್ಲಿ ಚಿಕ್ಕೋಡಿ ಜಿಲ್ಲೆಯನ್ನಾಗಿ ಮಾಡುವ ಕುರಿತು ಚರ್ಚೆ ನಡೆಯಬೇಕು ಎನ್ನುವ ದೃಷ್ಠಿಯಿಂದ ಜಿಲ್ಲಾ ಹೋರಾಟ ಸಮಿತಿ ಸೋಮವಾರ ದಡಿ.11 ಸೋಮವಾರದಂದು ಚಿಕ್ಕೋಡಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಂಡರು.

ಚಿಕ್ಕೋಡಿ ಲೋಕೋಪಯೋಗಿ ಇಲಾಖೆ ಸಭಾ ಭವನದಲ್ಲಿ ಜಿಲ್ಲಾ ಹೋರಾಟ ಸಮಿತಿಯು ಹಮ್ಮಿಕೊಂಡ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಹೋರಾಟ ಸಮಿತಿ ಈ ನಿರ್ಧಾರ ಕೈಗೊಂಡರು.

ಚರಮೂರ್ತಿಮಠದ ಸಂಪಾದನ ಸ್ವಾಮೀಜಿ ಮಾತನಾಡಿ ಅಭಿವೃದ್ಧಿ ದೃಷ್ಠಿಯಿಂದ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಬೇಡಿಕೆ ಇದೆ. ಸರ್ಕಾರ ಮನಸ್ಸು ಮಾಡಿ ಬೆಳಗಾವಿ ವಿಭಜಿಸಿ ನೂತನ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಗೋಕಾಕ ಜಿಲ್ಲೆಯನ್ನಾಗಿ ಮಾಡಬಾರದೆಂದು ನಮ್ಮದು ವಿರೋಧವಿಲ್ಲ ಆದರೆ ಸರ್ಕಾರ ಎರಡನ್ನು ಜಿಲ್ಲೆಯನ್ನಾಗಿ ಮಾಡಿದರೆ ಅನುಕೂಲವಾಗುತ್ತದೆ ಎಂದರು. ಪುರಸಭೆ ಮಾಜಿ ಉಪಾಧ್ಯಕ್ಷ ಸಂಜಯ ಕವಟಗಿಮಠ ಮಾತನಾಡಿ ಚಿಕ್ಕೋಡಿ ಜಿಲ್ಲೆಯನ್ನಾಗಿ ಮಾಡುವ ಹೋರಾಟದಲ್ಲಿ ಚಿಕ್ಕೋಡಿ ಬಂದ್ ಮಾಡುವ ನಿರ್ಧಾರ ಸದ್ಯಕ್ಕೆ ಕೈಬಿಟ್ಟು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯೋಣ, ಮುಂದೆ ಸರ್ಕಾರದ ನಿರ್ಧಾರ ನೋಡಿಕೊಂಡು ಮುಂದಿನ ಹೋರಾಟಕ್ಕೆ ಕೈಹಾಕೋಣ ಎಂದರು.