ಉ.ಕ ಸುದ್ದಿಜಾಲ ವಿಜಯಪುರ :

ಜೀವ ಉಳಿಸಬೇಕಾದ ಆಂಬ್ಯುಲೆನ್ಸ್  ಆಕ್ಸಿಡೆಂಟ್, ತುಂಬು ಗರ್ಭಿಣಿ ಸಾವನಪ್ಪಿರುವ ಘಟನೆ ತಾಳಿಕೋಟಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆಂಬ್ಯುಲೆನ್ಸ್ ಚಾಲಕನ ನಿರ್ಲಕ್ಷ್ಯವೇ ಆಕ್ಸಿಡೆಂಟ್ ಗೆ ಕಾರಣ ಅನ್ನೋ ಆರೋಪ ಕೇಳಿ ಬಂದಿದ್ದು, ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭೀಕರ ಆಂಬ್ಯುಲೆನ್ಸ್ ಅಪಘಾತದಲ್ಲಿ ಗರ್ಭಿಣಿ ಸಾವನಪ್ಪಿದ್ದಾರೆ. ನಿಂತಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್ ಗೆ ಗುದ್ದಿದ ಆಂಬ್ಯುಲೆನ್ಸ್. ಭಾಗ್ಯಶ್ರೀ ಪರಣ್ಣನವರ (20) ಮೃತಪಟ್ಟಿರುವ ಗರ್ಭಿಣಿ. ಗರ್ಭಿಣಿ ಹೊಟ್ಟೆಯಲ್ಲಿಯೇ ಮಗು ಸಾವು‌.

ಒಂದು ವರ್ಷ ಎಂಟು ದಿನವಾಯ್ತು ಮದುವೆಯಾಗಿ, ಕಳೆದ ವಾರವಷ್ಟೇ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದ ದಂಪತಿ. ವಿಜಯಪುರದ ರಾವೂತಪ್ಪ , ತಾಳಿಕೋಟಿಯ ನಾವದಗಿ ಗ್ರಾಮದ  ಭಾಗ್ಯಶ್ರೀ ವಿವಾಹ.

ಕಂದಮ್ಮನ ನಿರೀಕ್ಷೆಯಲ್ಲಿದ್ದ ಕುಟುಂಬದವರಿಗೆ ಆಕ್ಸಿಡೆಂಟ್ ಆಘಾತ. ಮೊದಲ ಹೆರಿಗೆಗಾಗಿ ತವರು ಮನೆಗೆ ತೆರಳಿದ್ದ ಭಾಗ್ಯಶ್ರೀ. ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಾಳಿಕೋಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು..

ಭಾಗ್ಯಶ್ರೀ ಆರೋಗ್ಯದಲ್ಲಿ ಏರುಪೇರಾದ ಕಾರಣ. ಗರ್ಭಿಣಿಯನ್ನು ಜಿಲ್ಲಾಸ್ಪತ್ರೆಗೆ ರವಾನಿಸು ವೇಳೆ ಅಪಘಾತ. ಮೃತ ಭಾಗ್ಯಶ್ರೀ ಪೋಷಕರಿಂದ ತಾಳಿಕೋಟೆ ಸಮುದಾಯ ಆಸ್ಪತ್ರೆ ಬಳಿ ಪ್ರತಿಭಟನೆ. ವೈದ್ಯಾಧಿಕಾರಿ ಮೇಲೆ ಹಲ್ಲೆಗೆ ಯತ್ನ..

ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಕ್ಕೆ ಅಸಮಾಧಾನ ಮೃತಳ ಪೋಷಕರ ಆಕ್ರೋಶ. ಆಂಬ್ಯುಲೆನ್ಸ್ ನಲ್ಲಿದ್ದ ಇಬ್ಬರು ಸ್ಟಾಪ್ ನರ್ಸ್ ಓರ್ವ ಸಹಾಯಕನಿಗೆ ಗಾಯ ಇವರನ್ನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಕುರಿತು ವಿಜಯಪೂರ ಜಿಲ್ಲೆ ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.