ಉ.ಕ ಸುದ್ದಿಜಾಲ ಚಿತ್ರದುರ್ಗ :
ಸಾರಿಗೆ ಸಚಿವರ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸಾವಿನ ಸಂಚಾರ. ಸಾರಿಗೆ ಸಚಿವ ಶ್ರೀರಾಮುಲು ಕ್ಷೇತ್ರದಲ್ಲಿ ಬಸ್ಸಿಗಾಗಿ ಆಹಾಕಾರ ಬಸ್ ಇಲ್ಲದೆ ಆಟೋ ಮೇಲೆ ಮುಗಿಬಿದ್ದು ಸವಾರಿ ವಿದ್ಯಾರ್ಥಿಗಳನ್ನು ಕುರಿಗಳಂತೆ ತುಂಬಿ ಮುಂದೆ ಸಾಗುವ ಆಟೋಗಳು.
ಆಟೋದಲ್ಲಿ ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಚಾರ. ಸ್ವಲ್ಪ ಯಾಮಾರಿದರೂ ಅಪಾಯ ಗ್ಯಾರಂಟಿ. ಹತ್ತಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ರು ನೋ ಯೂಸ್. ರಾಂಪುರ ಸೇರಿದಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪರದಾಟ. ನಿತ್ಯವೂ ಬಸ್ಸಿಗಾಗಿ ಕಾದು ಕಾದು ಕೂರುವ ವಿದ್ಯಾರ್ಥಿಗಳು. ಬಸ್ ಸಿಗದೆ ಅಪಾಯದಲ್ಲಿ ಆಟೋ ಸಂಚಾರ.